ನಿವೃತ್ತ ನೌಕರರಿಗೆ ಆರೋಗ್ಯ ಭತ್ಯೆ ನೀಡಿ'
ಕ.ಪ್ರ.ವಾರ್ತೆ ಮಾಗಡಿ ಆ.8
ನಿವೃತ್ತ ನೌಕರರಿಗೆ ಆರೋಗ್ಯ ಭತ್ಯೆ ತೀರ ಅತ್ಯವಶ್ಯಕವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕೆ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ಸಭೆಯಲ್ಲಿ ಸಂಘವು ತೀರ್ಮಾನಿಸಿತು.
ನಿವೃತ್ತ ನೌಕರರ ಸಂಘದ ಮಾಸಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ರೇಣುಕಪ್ಪ ನಿವೃತ್ತ ನೌಕರರು ಕೆಲವರು ಅನಾರೋಗ್ಯದಿಂದ ನರಳುತ್ತಿದ್ದಾರೆ. ಅವರಿಗೆ ಆರೋಗ್ಯ ಭತ್ಯೆ ಅತ್ಯಾವಶ್ಯಕವಾಗಿದ್ದು, ಸರ್ಕಾರ ಕೂಡಲೆ ನಿವೃತ್ತ ನೌಕರರಿಗೆ ಆರೋಗ್ಯ ಭತ್ಯೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ಸಂಘವು ತೀರ್ಮಾನಿಸಿರುವುದಾಗಿ ತಿಳಿಸಿದರಲ್ಲದೆ ಇಲ್ಲಿನ ನಿವೃತ್ತ ನೌಕರರು ಸುಮಾರು 30 ರಿಂದ 35 ವರ್ಷಗಳು ಸೇವೆ ಸಲ್ಲಿಸದವರಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಆರೋಗ್ಯ ಭತ್ಯೆ ಆರೋಗ್ಯ ಕಾಪಾಡಿಕೊಳ್ಳಲು ಅನಿವಾರ್ಯವಾಗಿದೆ. ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ನಾಗರಾಜು ಮಾತನಾಡಿ ಸಂಘದ ಸದೃಢ ಬೆಳವಣಿಗೆಗೆ ನಿವೃತ್ತ ಎಲ್ಲಾ ನೌಕರರು ಸಂಘದಲ್ಲಿ ಕಡ್ಡಾಯವಾಗಿ ಸದಸ್ಯತ್ವ ಪಡೆದುಕೊಳ್ಳಬೇಕಿದೆ ಎಂದರು.
ಸಂಘವು ಹಲವಾರು ವರ್ಷಗಳಿಂದ ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. 2013-14ನೇ ಸಾಲಿನಲ್ಲಿ ಮಾಗಡಿ ವಿಜಯ ಬ್ಯಾಂಕ್ ಶಾಖೆಯಲ್ಲಿ 85 ಸಾವಿರ ರು.ಗಳನ್ನು ಸಂಘದಲ್ಲಿ ಠೇವಣಿ ಇಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಎಚ್.ಹನುಮೇಗೌಡ ತಿಳಿಸಿದರು. ಸಂಘದ ನಿರ್ದೇಶಕರಾದ ಎಲ್.ನಂಜಯ್ಯ, ಬಿ.ನಂಜುಂಡಯ್ಯ, ತಿಬ್ಬಯ್ಯ, ಗಂಗರಾಮಯ್ಯ,ಎಲ್.ರಾಮಯ್ಯ, ರಂಗಸ್ವಾಮಯ್ಯ,ಇತರೆ ನಿವೃತ್ತ ನೌಕರ ಸದಸ್ಯರುಗಳು ಹಾಜರಿದ್ದರು.