ರಂಗಮಂದಿರದ ಚಾವಣಿ ಮೇಲೆ ಗಿಡಗೆಂಟೆ: ಕ್ರಮಕ್ಕೆ ಆಗ್ರಹ
ಮಾಗಡಿ: ಪಟ್ಟಣದ ಹೃದಯಭಾಗದಲ್ಲಿರುವ ರಂಗಮಂದಿರದ ಚಾವಣಿ ಮೇಲೆ ಕುರುಚಲು ಗಿಡಗಂಟೆಗಳು ಬೆಳೆದು, ರಂಗಮಂದಿರ ಚಾವಣಿ ವಿನಾಶದ ಹಂಚಿನಲ್ಲಿದೆ. ಪುರಸಭೆ ಇತ್ತ ಗಮನ ಹರಿಸಿ, ರಂಗಮಂದಿರದ ಚಾವಣೆ ಮೇಲೆ ಬೆಳಿದಿರುವ ಕುರುಚಲು ಗಿಡಗಳನ್ನು ಕೂಡಲೆ ತೆಗೆಸುವ ಮೂಲಕ ರಂಗಮಂದಿರದ ಸೌಂದರ್ಯ ಕಾಪಾಡುವಂತೆ ಪುರನಾಗರೀಕರು ಒತ್ತಾಯಿಸಿದ್ದಾರೆ. ಸುಣ್ಣ, ಬಣ್ಣ ಕಾಣದ ರಂಗಮಂದಿರ ಈಗ ಶಿಥಿಲ ಅವಸ್ಥೆಯಲ್ಲಿದೆ. ರಂಗಮಂದಿರದ ಗೋಡೆ ಸುತ್ತಲು ಸ್ವಚ್ಛತೆಯಿಲ್ಲ, ಎಲ್ಲಿ ನೋಡಿದರೂ ಮಲಮೂತ್ರ ವಿರ್ಸಜನೆ ಮಾಡುವ ಸ್ಥಳವಾಗಿ ಮಾರ್ಪಟಿದ್ದು, ದುರ್ವಾಸನೆ ಬೀರುತ್ತಿದೆ. ಪಕ್ಕದಲ್ಲೇ ಇರುವ ಶೌಚಾಲಯವೂ ಸ್ವಚ್ಛತೆಯಿಲ್ಲದೆ ಮೂತ್ರ ವಿಸರ್ಜನೆ ಮಾಡಲಾಗದ ಸ್ಥಿತಿಯಲ್ಲಿದೆ. ಕೂಡಲೆ ಪುರಸಭೆ ಎಚ್ಚತ್ತು ಶೌಚಾಲಯ ಮತ್ತು ರಂಗಮಂದಿರದ ಸುತ್ತಲು ಸ್ವಚ್ಛಗೊಳಿಸಬೇಕು. ಶಿಥಿಲ ರಂಗಮಂದಿರವನ್ನು ದುರಸ್ಥಿ ಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.