ಆಟೋದಲ್ಲಿ ಅನುಮಾನಾಸ್ಪದ ಸಾವು
ಕನಕಪುರ: ಸೋದರಿಯ ಮನೆಗೆ ತೆರಳುತ್ತೇನೆಂದು ಹೋದವ ತನ್ನ ಆಟೋದಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕನಕಪುರದ ಮುನಿಸಿಪಲ್ ಹೈಸ್ಕೂಲ್ ಹಿಂಭಾಗ ನಡೆದಿದೆ.
ಮೃತನು ಮೂಲತಃ ಮೈಸೂರಿನ ನಾಗರಾಜು (36)ಎಂದು ತಿಳಿದು ಬಂದಿದ್ದು ಈತನು ಕನಕಪುರ ತಾಲೂಕು ಗಾಣಾಳು ಗ್ರಾಮದ ಶೋಭಾ ಎಂಬುವವರೊಂದಿಗೆ ಇಲ್ಲಿನ ಮುನಿನಗರದಲ್ಲಿ ವಾಸವಾಗಿದ್ದನು.
ಕನಕಪುರದ ಎವಿಆರ್‌ರಸ್ತೆಯಲ್ಲಿನ ತನ್ನ ಸಹೋದರಿ ಮನೆಗೆ ತೆರಳುತ್ತೇನೆಂದು ತನ್ನ ಆಟೋದಲ್ಲಿ ಹೊರಟ ನಾಗರಾಜು ಪ್ರಾಯಶಃ ಮದ್ಯದಲ್ಲಿ ವಿಷವನ್ನು ಬೆರೆಸಿ ಕುಡಿದು ಸಾವನ್ನಪ್ಪಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಾರೆ. ಈ ಸಾವಿನ ಬಗ್ಗೆ ಕನಕಪುರ ಟೌನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರಕ್ಷಕ ಉಪನಿರೀಕ್ಷಕ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪರಾಧ ಉಪನಿರೀಕ್ಷಕ ಗಣೇಶ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿದ್ದಾರೆ.