ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಖೋಟಾ ನೋಟು; ವ್ಯಕ್ತಿ ಬಂಧನ

Rashmi Kasaragodu
Updated On : 10 Aug 2013, 11:23 am

ಆನೇಕಲ್ಲು: ಡಿಪ್ಲೊಮಾ ಪರೀಕ್ಷೆಯಲ್ಲಿ ನಕಲು ಹೊಡೆದು, ಡಿಬಾರಾಗಿದ್ದ ಯುವಕನೊಬ್ಬ ಖೋಟಾ ನೋಟು ಮುದ್ರಿಸಿ ಚಲಾವಣೆಗೆ ತರಲು ಯತ್ನಿಸುತ್ತಿದ್ದಾಗ ಪೊಲೀಸರ ಅತಿಥಿಯಾಗಿದ್ದಾನೆ.
ಆಂಧ್ರ ಮೂಲದ ಪ್ರಕಾಶಂ ಜಿಲ್ಲೆಯ ಗೊಲ್ಲಪುರಿ ನರೇಂದ್ರಬಾಬು (19) ಬಂಧಿತ ಆರೋಪಿ. ಈತನನ್ನು ಬಂಧಿಸಿದ ಪೊಲೀಸರು ಈತ ವಾಸವಿದ್ದ ಲಕ್ಷೀ ಗಣೇಶ ಸ್ಟೇ ಹೋಂ ಮೇಲೆ ದಾಳಿ ನಡೆಸಿ ಲ್ಯಾಪಾಟಾಪ್ ಹಾಗೂ ಪ್ರಿಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈತನ ಬಳಿ ಇದ್ದ 100 ಮುಖಬೆಲೆಯ 30 ಹಾಗೂ 500 ಮುಖಬೆಲೆಯ 4 ನೋಟು ವಶಪಡಿಸಿಕೊಂಡಿದ್ದು ಈ ಜಾಲದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಬಾರ್ ಕ್ಯಾಷಿಯರ್ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದರು. ಈ ಸಂಬಂಧ ಪೊಲೀಸರು ಬಾಬುವನ್ನು ಬಂಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement