ಬಿಎಂಟಿಸಿಗೆ ಪಾದಚಾರಿ ಬಲಿ
ಆನೇಕಲ್ಲು: ಜಿಗಣಿ-ಬನಶಂಕರಿ ಮಾರ್ಗ ಸಂಚರಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಪಾದಚಾರಿಯ ಮೇಲೆ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿಂಗಸಂದ್ರ ಗೇಟ್ ಬಳಿ ನಡೆದಿದೆ. ಆಂಧ್ರ ಮೂಲದ ಶ್ರೀ ರಾಮರೆಡ್ಡಿ(45) ಮೇಲೆ ಹರಿದು ಬಸ್ ನಂತರ ಅಲ್ಲೇ ನಿಲ್ಲಿಸಿದ್ದ ಬೈಕ್ ಅನ್ನು ಸಹ ನುಜ್ಜುಗುಜ್ಜು ಮಾಡಿತು.