ರಂಜಾನ್ ಎಲ್ಲರ ಬಾಳಲ್ಲಿ ಸುಖ, ನೆಮ್ಮದಿ ತರಲಿ
ಮಾಗಡಿ: ರಂಜಾನ್ ಮುಸಲ್ಮಾನರು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುವ ಪವಿತ್ರವಾದ ಹಬ್ಬ, ರಂಜಾನ್ ಆಚರಣೆ ಆರಂಭವಾಗುವುದು ಉಪವಾಸ ವ್ರತದಿಂದ, ಉಪವಾಸವೇ ಇಲ್ಲಿ ಪ್ರಧಾನ, ಈ ಹಬ್ಬವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಂತೋಷ, ನೆಮ್ಮದಿ ತರಲೆಂದು ಪ್ರಾರ್ಥಿಸಿದ್ದಾಗಿ ಬಿಸ್ಕೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಎಸ್. ಸುಹೇಲ್ ನುಡಿದರು. ಅವರು ಪವಿತ್ರ ರಂಜಾನ್ ಹಬ್ಬದ ಸಂಭ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿ, ವರ್ಷದ 11 ತಿಂಗಳು ನಮ್ಮ ದೇಹ, ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು 1 ತಿಂಗಳ ಉಪವಾಸ ಮಾಡುವ ಮೂಲಕ ಶುಧ್ಧೀಕರಿಸಿಕೊಳ್ಳುವ ಧಾರ್ಮಿಕ ಕ್ರಿಯೆಯಿದು ಎಂದರು. ಅಲ್ಪಸಂಖ್ಯಾತರ ಮುಖಂಡ ಇನಾಯಿತ್ ಉಲ್ಲಾ ಮಾತನಾಡಿದರು. ಮಾಗಡಿ ಪಟ್ಟಣ ಹೊಸ, ಹಳೇ ಮಸೀದಿ ಮೊಹಲ್ಲಾ, ಜಮಾಲ್ ಸಾಬರಪಾಳ್ಯ, ಆಗಲಕೋಟೆ, ಕುದೂರು, ಹುಲೀಕಲ್, ಅದರಂಗಿ, ಕಾಗಿಮಡು, ಕೆಂಪಾಪುರ, ಗುಂಡೀಗೆರೆ, ಸಂಕೀಘಟ್ಟ, ಹೊಸ ಮತ್ತು ಹಳೇಲಾಯ, ಮಾಯಸಂದ್ರ, ಅಂಜಿಬಸವಪಾಳ್ಯ, ಹೊಸಪಾಳ್ಯ, ಕಪನಿಗೌಡನಪಾಳ್ಯ, ದುಬ್ಬಗೊಟ್ಟಿಕೆ, ಮುತುಗಡನಹಳ್ಳಿ, ಮುತ್ತಸಾಗರ, ಮುತ್ತನಹಳ್ಳಿ ಇತರೆಡೆ ಮುಸಲ್ಮಾನರು ಶ್ರದ್ಧಾಭಕ್ತಿಯಿಂದ ಸಂಭ್ರಮ ರಂಜಾನ್ ಆಚರಣೆ ಮೂಲಕ ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೌಲಿಗಳಾದ ಬೋಡಾನ್‌ಸಾಬ್, ಪಯಾಜ್ ಲಲ್, ಮದರಿನ ಸಾಬ್ ಇತರರು ಕುರಾನ್ ಪಠಿಸಿದರು. ಮಹಮದ್ ರಫೀ, ರಿಯಾಜ್, ಆರೀಫ್ ಪಾಷ, ಮಜು, ಫೈರೋಜ್, ನಯಾಜ್, ನವಾಬ್, ಮುನೀರ್ ಅಹಮದ್, ಅನ್ಸಾರ್ ಪಾಷ್, ಅಕ್ರಮ್ ಪಾಷ, ರಿಜಾಜ್, ಮಹಮದ್ ಅನ್ವರ್ ಪಾಷ್, ಜಮೀರ್ ಅಹಮದ್, ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.