ಅನಿತಾ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚನ್ನಪಟ್ಟಣ: ವಂದಾರಗುಪ್ಪೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಎಚ್.ಡಿ. ಕುಮಾರಸ್ವಾಮಿ ಸಂಸದರಾಗಿದ್ದಾಗ ತಮ್ಮ ಗ್ರಾಮಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಕೊಟ್ಟಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅನಿತಾ ಕುಮಾರಸ್ವಾಮಿ, ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ. ಅಭಿವೃದ್ಧಿ ಮಾಡಲೆಂದೇ ಚುನಾವಣೆಗೆ ಸ್ಪರ್ಧಿಸಿರೋದು. ಸಂಸದರಾದ ತಕ್ಷಣ ತಮ್ಮ ಮೊದಲ ಆದ್ಯತೆ ನಿಮ್ಮ ಗ್ರಾಮದ ಸಮಸ್ಯೆಗಳ ಪರಿಹರಿಸುವದು ಎಂದು ಸಮಾಧಾನ ಪಡಿಸಿದರು.