ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತ್ಯಾಗದ ಆದರ್ಶ ಜಗತ್ತಿಗೆ ಸಾರುವ ವಿವೇಕವಾಣಿ

Rashmi Kasaragodu
Updated On : 12 Aug 2013, 11:25 am

ದೊಡ್ಡಬಳ್ಳಾಪುರ: ಜಗತ್ತಿನಲ್ಲಿ ಭಾರತ ಜ್ಞಾನ ಪ್ರಸಾರದಲ್ಲಿ ತನ್ನ ಪಾರಂಪರಿಕ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಸ್ವಾಮಿ ವಿವೇಕಾನಂದ, ಗೌತಮಬುದ್ಧ, ಮಹಾತ್ಮಗಾಂಧಿಯವರಂತಹ ದಾರ್ಶನಿಕರ ಚಿಂತನೆಗಳೇ ಇದಕ್ಕೆ ಕಾರಣ ಎಂದು ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಹೇಳಿದರು. ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾವೀಧಾರಿಗಳು ವಿವೇಕಾನಂದರು ಕೊಟ್ಟ ಕಾವಿ ದಾರ್ಶನಿಕ ಮೌಲ್ಯಗಳನ್ನು ಹೊಂದಬೇಕಿತ್ತು. ಆದರೆ ಇಂದು ಆ ಮೌಲ್ಯಗಳು ಅಪಮೌಲ್ಯೀಕರಣವಾಗಿವೆ ಎಂದರು.
ಪರಿಸರವಾದಿ ಕೆ.ಗುರುದೇವ್ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಚಿತ್ರಾವತಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್ ಅಧ್ಯಕ್ಷತೆ ವಹಿಸಿದ್ದರು. ಹಾಡೋನಹಳ್ಳಿ ನಾಗರಾಜ್, ಸಂತೋಷ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಚಂದ್ರಪ್ಪ, ಸಹಾಯಕ ಅಧಿಕಾರಿ ಡಾ.ಬಿ.ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement