ದೊಡ್ಡಣ್ಣಗೆ ರಂಗ ಕೌಸ್ತುಭ
ಆನೇಕಲ್ಲು: ಆನೇಕಲ್ ತಾಲೂಕಿನ ಹಲವಾರು ಕಲಾ ತಂಡಗಳು ಅಹೋರಾತ್ರಿ ಪೌರಾಣಿಕ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುವ ಮೂಲಕ ರಂಗಭೂಮಿ ಕಲೆಯನ್ನು ಜೀವಂತವಾಗಿರಿಸಿದೆ ಎಂದು ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಪಿ. ರಾಧಾರಮಣ ತಿಳಿಸಿದ್ದಾರೆ. ಅವರು ತಾಲೂಕಿನ ಅಪ್ರತಿಮ ರಂಗಭೂಮಿ ಕಲಾವಿದ ಹಾಗೂ ಪೋಷಕ ತೆಲಗರಹಳ್ಳಿಯ ದೊಡ್ಡಣ್ಣಗೆ ರಂಗ ಕೌಸ್ತುಭ ಪ್ರಶಸ್ತಿಯನ್ನು ಪ್ರದಾನ ಮಾಡಿದ ನಂತರ ಮಾತನಾಡಿ ತಾಲೂಕಿನ ಹೆಚ್. ಎಸ್. ನಂಜಪ್ಪನವರು, ಬಳ್ಳೂರಿನ ನಾರಾಯಣರೆಡ್ಡಿ ಸೇರಿದಂತೆ ಹಲವಾರು ಪೋಷಕರು ಸ್ವತಃ ನಟಿಸುವುದಲ್ಲದೇ ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಾಲೂಕಿನ ಹಲವು ಕಲಾವಿದರಿಗೆ ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ. ತೆಲಗರ ಹಳ್ಳಿ ದೊಡ್ಡಣ್ಣನವರಿಗೆ ಬೆಂಗಳೂರಿನ ಕರ್ನಾಟಕ ರಂಗ ಸಂಗೀತ ಪರಿಷತ್ ನೀಡಿರುವ ರಂಗ ಕೌಸ್ತುಭ ಪ್ರಶಸ್ತಿ ಕಲಾವಿದರಿಗೆ ಗೌರವ ತಂದಿದೆ. ರಂಗ ಕಲೆ ಮೂಲಕ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ, ಸಹೋದರತೆ ಹಾಗೂ ಭಾವೈಕ್ಯತೆಯನ್ನು ತುಂಬುತ್ತದೆ. ಹಳ್ಳಗಾಡಿನ ಜನರು ಕನ್ನಡದ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಗಡಿ ಭಾಗದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿದ್ದು ಕನ್ನಡ ಸಾಹಿತ್ಯ ಪರಿಷತ್ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಕೋರಿದರು.
ಅಭಿನಂದನೆ: ಹಿರಿಯ ಕಲಾವಿದ ದೊಡ್ಡಣ್ಣರವರಿಗೆ ಪ್ರಶಸ್ತಿ ಸಂದಿರುವುದು ತಾಲೂಕಿಗೆ ಕೀರ್ತಿ ಬಂದಂತಾಗಿದೆ ಎಂದು ಶಾಸಕ ಬಿ.ಶಿವಣ್ಣ ಅಭಿನಂದನೆ ಸಲ್ಲಿಸಿದ್ದಾರೆ.