ರಸ್ತೆ ಅಪಘಾತ ಬಾಲಕಿ ಸಾವು
ಮಾಗಡಿ: ರಸ್ತೆ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, 5 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ತಾಲೂಕಿನ ಮರೂರು ಬಳಿ ನಡೆದಿದೆ. ಆಲಪ್ಪನಹಳ್ಳಿ ವಾಸಿ ಶಾನಿಯಾ ಬಾನು (8) ಮತೃಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೊಡ್ಡಣ್ಣಗೆ ರಂಗ
ಕೌಸ್ತುಭ ಪ್ರಶಸ್ತಿ
ಆನೇಕಲ್ಲು: ಆನೇಕಲ್ ತಾಲೂಕಿನ ಹಲವಾರು ಕಲಾ ತಂಡಗಳು ಅಹೋರಾತ್ರಿ ಪೌರಾಣಿಕ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುವ ಮೂಲಕ ರಂಗಭೂಮಿ ಕಲೆಯನ್ನು ಜೀವಂತವಾಗಿರಿಸಿದೆ ಎಂದು ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಪಿ. ರಾಧಾರಮಣ ತಿಳಿಸಿದ್ದಾರೆ. ಅವರು ತಾಲೂಕಿನ ಅಪ್ರತಿಮ ರಂಗಭೂಮಿ ಕಲಾವಿದ ಹಾಗೂ ಪೋಷಕ ತೆಲಗರಹಳ್ಳಿಯ ದೊಡ್ಡಣ್ಣಗೆ ರಂಗ ಕೌಸ್ತುಭ ಪ್ರಶಸ್ತಿಯನ್ನು ಪ್ರದಾನ ಮಾಡಿದ ನಂತರ ಮಾತನಾಡಿ ತಾಲೂಕಿನ ಹೆಚ್. ಎಸ್. ನಂಜಪ್ಪನವರು, ಬಳ್ಳೂರಿನ ನಾರಾಯಣರೆಡ್ಡಿ ಸೇರಿದಂತೆ ಹಲವಾರು ಪೋಷಕರು ಸ್ವತಃ ನಟಿಸುವುದಲ್ಲದೇ ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಾಲೂಕಿನ ಹಲವು ಕಲಾವಿದರಿಗೆ ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ. ತೆಲಗರ ಹಳ್ಳಿ ದೊಡ್ಡಣ್ಣನವರಿಗೆ ಬೆಂಗಳೂರಿನ ಕರ್ನಾಟಕ ರಂಗ ಸಂಗೀತ ಪರಿಷತ್ ನೀಡಿರುವ ರಂಗ ಕೌಸ್ತುಭ ಪ್ರಶಸ್ತಿ ಕಲಾವಿದರಿಗೆ ಗೌರವ ತಂದಿದೆ. ರಂಗ ಕಲೆ ಮೂಲಕ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ, ಸಹೋದರತೆ ಹಾಗೂ ಭಾವೈಕ್ಯತೆಯನ್ನು ತುಂಬುತ್ತದೆ. ಹಳ್ಳಗಾಡಿನ ಜನರು ಕನ್ನಡದ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಗಡಿ ಭಾಗದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿದ್ದು ಕನ್ನಡ ಸಾಹಿತ್ಯ ಪರಿಷತ್ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಕೋರಿದರು.
ಅಭಿನಂದನೆ: ತಾಲೂಕಿನ ಹಿರಿಯ ಕಲಾವಿದ ದ್ಘೊಜ್ಘಣ್ಣರವರಿಗೆ ಪ್ರಶಸ್ತಿ ಸಂದಿರುವುದು ತಾಲೂಕಿಗೆ ಕೀರ್ತಿ ಬಂದಂತಾಗಿದೆ ಎಂದು ಶಾಸಕ ಬಿ.ಶಿವಣ್ಣ ಅಭಿನಂದನೆ ಸಲ್ಲಿಸಿದ್ದಾರೆ. ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಬರಬಹುದಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸುವುದಾಗಿ ತಿಳಿಸಿದರು. ಚಿಕ್ಕಾಗಡೆ ಯಲ್ಲಪ್ಪ, ತಟ್ನಹಳ್ಳಿ ಚೌಡರೆಡ್ಡಿ, ಕಜಯಣ್ಣ ಮಾರನಾಯಕನಹಳ್ಳಿ ಲಕ್ಷ್ಮಣ್ ಇದ್ದರು.
ಇಂದು ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ
ದೊಡ್ಡಬಳ್ಳಾಪುರ: ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಡಿಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಚಾಲನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದಲ್ಲಿ ಆ.12ರ ಸೋಮವಾರ ಬೆಳಗ್ಗೆ 10 ಗಂಟೆಗೆ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ. ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಯುವ ಘಟಕದ ಅಧ್ಯಕ್ಷ ವೆಂಕಟೇಶ್(ಅಪ್ಪಿ) ತಿಳಿಸಿದ್ದಾರೆ.
ಪಂಚಮಿ ಆಚರಣೆ
ಮಾಗಡಿ: ನಾಗರ ಪಂಚಮಿಯ ಪ್ರಯುಕ್ತ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಹಿಳೆಯರು ಹುತ್ತಕ್ಕೆ ಹಾಲನ್ನು ಎರೆದು ಪೂಜೆ ಸಲ್ಲಿಸಿ ಪುನೀತರಾದರು. ನಂತರ ಸಹೋದರರ ಬೆನ್ನಿಗೆ ಅರಿಷಿಣ, ಕುಂಕುಮವನ್ನಿಟ್ಟು ಪೂಜೆ ಸಲ್ಲಿಸಿ ದೀರ್ಘಕಾಲ ಬಾಳುವಂತೆ ಅರಿಸುವುದು ಹಬ್ಬವ ವಿಶೇಷವಾಗಿತ್ತು.