ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲೆ ಕಟ್ಟಡಕ್ಕೆ ಪಿಳ್ಳಮುನಿಶಾಮಪ್ಪ ಶಂಕುಸ್ಥಾಪನೆ

Rashmi Kasaragodu
Updated On : 12 Aug 2013, 11:20 am

ದೇವನಹಳ್ಳಿ: ಇಲ್ಲಿನ ಕೋಟೆ ಬೀದಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಶನಿವಾರ ಶಾಸಕರಾದ ಪಿಳ್ಳಮುನಿಶಾಮಪ್ಪರವರು ಶಂಕುಸ್ಥಾಪನೆ ನೆರವೇರಿಸಿದರು. ಈ ಶಾಲಾ ಕಟ್ಟಡ ಎರಡು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಬೆಂಗಳೂರಿನ ಫಂಡ್ ಎ ಕಾಜ್ ಫೌಂಡೇಷನ್ ಸಂಸ್ಥೆಯ ಶೈಲ ರಾಮಕೃಷ್ಣ ಹಾಗೂ ಸುಂದರ್‌ರವರು ಉದಾರವಾಗಿ ಸಂಸ್ಥೆ ವತಿಯಿಂದ ನೆರವು ನೀಡಿದ್ದಾರೆ.
ದೇವನಹಳ್ಳಿ ಕೋಟೆ ರಸ್ತೆಯಲ್ಲಿರುವ 97 ವರ್ಷ ಕಳೆದಿರುವ ಪುರಾತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಾಗಿದ್ದ ಕಾರಣ ಕಳೆದ 5 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಅನುಮತಿ ಮೇರೆಗೆ ಕೆಡವಲಾಯಿತು, ಆಗ ಸುಸಜ್ಜಿತವಾಗಿ ಕಟ್ಟಿಕೊಡಲು ದಾನಿಗಳೊಬ್ಬರು ಮುಂದೆ ಬಂದರು. ಕಾಮಗಾರಿ ಆರಂಭಿಸುವ ಹಂತದಲ್ಲಿ ಪುರಾತತ್ವ ಇಲಾಖೆಯವರು ಹತ್ತಿರದಲ್ಲೇ ಪುರಾತನ ಕೋಟೆ ಆವರಣ ಇರುವುದರಿಂದ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಿಲ್ಲ. ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಹೆಚ್.ವಿ.ವೆಂಕಟೇಶಪ್ಪರವರು ಆಗಿನ ಬಿಇಒ ಹನುಮಂತಪ್ಪರವರು ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರ ಪುರಾತತ್ವ ಇಲಾಖೆಯವರಿಗೆ ಹೊಸದಾಗಿ ಶಾಲೆ ಕಟ್ಟಲು ಅನುಮತಿ ನೀಡಲು ಮನವಿ ಮಾಡಿದ್ದರಿಂದ ಮೂರು ವರ್ಷದೊಳಗಾಗಿ ಶಾಲಾ ಕಟ್ಟಡ ಕಟ್ಟಬೇಕೆಂದು ಅನುಮತಿ ದೊರೆಯಿತು.   
ಉಪನಿರ್ದೇಶಕರ ಕಚೇರಿಗೆ ಆಗಮಿಸಿದ್ದ ಕಾಜ್ ಎ ಫೌಂಡೇಷನ್ ಸಂಸ್ಥೆಯ ಶೈಲ ರಾಮಕೃಷ್ಣ ಹಾಗೂ ಸುಂದರ್‌ರವರು ತಮ್ಮ ಸಂಸ್ಥೆಯಿಂದ ನಗರದಲ್ಲಿ ಯಾವುದಾದರೂ ಶಿಕ್ಷಣ ಸಂಸ್ಥೆಗೆ ದಾನ ಕೊಡುವುದಾಗಿ ಮುಂದೆ ಬಂದಿದ್ದರು. ಇದನ್ನು ತಿಳಿದ ಉಪನಿರ್ದೇಶಕರಾದ ವೆಂಕಟೇಶಪ್ಪರವರು ಆ ದಾನಿಗಳನ್ನು ದೇವನಹಳ್ಳಿಗೆ ಕರೆದುಕೊಂಡು ಬಂದು ಶಾಲೆ ಕಟ್ಟಿಸಿಕೊಡಿ ಎಂಬ ಕೋರಿಕೆಗೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿದೆ.
 ಉದ್ಘಾಟಿಸಿದ ಶಾಸಕ ಪಿಳ್ಳಮುನಿಶಾಮಪ್ಪರವರು, ಈ ಶಾಲೆ ಕಟ್ಟಲು ಮುಂದೆ ಬಂದಿರುವ ದಾನಿಗಳನ್ನು ಅಭಿನಂದಿಸಿದರಲ್ಲದೆ ಈ ಶಾಲಾ ಕಟ್ಟಡ ನಿರ್ಮಾಣ ಸಂಧರ್ಭದಲ್ಲಿ ಸ್ಥಳೀಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement