ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

15 ರಂದು ಸಭೆ: ಯಾರನ್ನು ಬೆಂಬಲಿಸಬೇಕೆಂದು ಸಿಪಿವೈ ನಿರ್ಧಾರ

Rashmi Kasaragodu
Updated On : 13 Aug 2013, 12:43 pm

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಕೇಂದ್ರ ಬಿಂದು ವೆನಿಸಿರುವ ಸಮಾಜವಾದಿ ಪಕ್ಷ ಆ.15 ರಂದು ಉಪಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಕಾರ್ಯಕರ್ತರ ಸಭೆ ಕರೆದಿದೆ.
ಪಕ್ಷದ ರಾಜ್ಯಾಧ್ಯಕ್ಷ ಕ್ಷೇತ್ರದ ಶಾಸಕ ಯೋಗೇಶ್ವರ್ ನೇತೃತ್ವದಲ್ಲಿ ಕರೆಯಾಲಾಗಿರುವ ಸಭೆಯಲ್ಲಿ ಉಪಚುನಾವಣೆಯಲ್ಲಿ ಪಕ್ಷ ಯಾರನ್ನು ಬೆಂಬಲಿಸಬೇಕೆಂದು ನಿರ್ಣಯ ಕೈಗೊಳ್ಳಲಿದೆ.
ಈಗಾಗಲೇ ಸಮಾಜವಾದಿ ಪಕ್ಷದ ಶಾಸಕ ಯೋಗೇಶ್ವರ್‌ರನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಬೆಂಬಲ ಕೋರಿದ್ದು ಮುಖ್ಯಮಂತ್ರಿಯೊಂದಿಗೆ ಯೋಗೇಶ್ವರ್ ಮಾತನಾಡಿದ್ದಾರೆ.
ಪಕ್ಷದ ರಾಷ್ಟ್ರ ಘಟಕ ಉಪಚುನಾವಣೆಯ ಬಗ್ಗೆ ಸ್ಥಳೀಯವಾಗೇ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿರುವುದಾಗಿ ಯೋಗೇಶ್ವರ್ ತಿಳಿಸಿದ್ದಾರೆ.
ಬಿದರಿ ಪ್ರತ್ಯಕ್ಷ:  ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸುದ್ದಿ ಖಚಿತಗೊಂಡಿದ್ದು ಯೋಗೇಶ್ವರ್ ಮುದ್ರಿಸಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರ ಸಭೆಯ ಕರಪತ್ರದಲ್ಲಿ ಶಂಕರ್ ಬಿದಿರಿ ಭಾವ ಚಿತ್ರ ಪ್ರತ್ಯಕ್ಷವಾಗುವ ಮೂಲಕ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಗೊಂಡಿರುವ ಸಂಗತಿಯನ್ನು ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement