ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗುಟ್ಕಾ ನಿಷೇಧ ಕಡ್ಡಾಯ ಪಾಲಿಸಲು ಪಿಎಸ್‌ಐ ತಾಕೀತು

Rashmi Kasaragodu
Updated On : 13 Aug 2013, 12:44 pm

ಕ.ಪ್ರ.ವಾರ್ತ್ಣೆ ಸೂಲಿಬೆಲೆ     ಆ.12
ಗುಟ್ಕಾ ನಿಷೇದಿಸಿ ಜಾರಿಗೆ ತಂದಿರುವ ಕಾನೂನು ಅನ್ನು ಪ್ರತಿಯೊಬ್ಬ ಅಂಗಡಿ ಮಾಲೀಕರು ಪಾಲಿಸಬೇಕು. ನಿಷೇಧ ಮಾಡಿರುವ ಗುಟ್ಕಾ ಪ್ಯಾಕೆಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಪಿಎಸ್‌ಐ  ಬಿ.ರಾಜಣ್ಣ  ಅಂಗಡಿ ಮಾಲೀಕರಿಗೆ ತಾಕೀತು ಮಾಡಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣೆ ಆವರಣದಲ್ಲಿ ಪಟ್ಟಣದ ಅಂಗಡಿ ಮಾಲೀಕರಿಗಾಗಿ ಹಮ್ಮಿಕೊಂಡಿದ್ದ ಗುಟ್ಕಾ ಮಾರಾಟ ನಿಷೇಧ ಕಾನೂನು ತಿಳುವಳಿಕೆ ಹಾಗೂ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಗುಟ್ಕಾ ನಿಷೇಧಿಸಿ ಕಾನೂನು ಜಾರಿಗೆ ತಂದಿದ್ದು, ಅಂಗಡಿಗಳಲ್ಲಿ ಗುಟ್ಕಾ ಮಾರಾಟ ಮಾಡುವುದು ಅಪರಾಧ ಎಂದರು. ಇದೇ ವೇಳೆ ಪಟ್ಟಣದ ನಾನಾ ಅಂಗಡಿಗಳಿಂದ ಆಗಮಿಸಿದ್ದ ಮಾಲೀಕರು ತಮ್ಮ ಅಭಿಪ್ರಾಯದ ಜೋತೆಗೆ ಮಾರಾಟ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement