ಗುಟ್ಕಾ ನಿಷೇಧ ಕಡ್ಡಾಯವಾಗಿ ಪಾಲಿಸಲು ತಾಕೀತು
ಸೂಲಿಬೆಲೆ: ಗುಟ್ಕಾ ನಿಷೇದಿಸಿ ಜಾರಿಗೆ ತಂದಿರುವ ಕಾನೂನು ಅನ್ನು ಪ್ರತಿಯೊಬ್ಬ ಅಂಗಡಿ ಮಾಲೀಕರು ಪಾಲಿಸಬೇಕು. ನಿಷೇಧ ಮಾಡಿರುವ ಗುಟ್ಕಾ ಪ್ಯಾಕೆಟ್ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಪಿಎಸ್ಐ ಬಿ.ರಾಜಣ್ಣ ಅಂಗಡಿ ಮಾಲೀಕರಿಗೆ ತಾಕೀತು ಮಾಡಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣೆ ಆವರಣದಲ್ಲಿ ಪಟ್ಟಣದ ಅಂಗಡಿ ಮಾಲೀಕರಿಗಾಗಿ ಹಮ್ಮಿಕೊಂಡಿದ್ದ ಗುಟ್ಕಾ ಮಾರಾಟ ನಿಷೇಧ ಕಾನೂನು ತಿಳುವಳಿಕೆ ಹಾಗೂ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಗುಟ್ಕಾ ನಿಷೇಧಿಸಿ ಕಾನೂನು ಜಾರಿಗೆ ತಂದಿದ್ದು, ಅಂಗಡಿಗಳಲ್ಲಿ ಗುಟ್ಕಾ ಮಾರಾಟ ಮಾಡುವುದು ಅಪರಾಧ ಎಂದರು. ಪಟ್ಟಣದ ನಾನಾ ಅಂಗಡಿಗಳಿಂದ ಆಗಮಿಸಿದ್ದ ಮಾಲೀಕರು ತಮ್ಮ ಅಭಿಪ್ರಾಯದ ಜೋತೆಗೆ ಮಾರಾಟ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದರು.