2 ಲಕ್ಷ ಅಪಹರಿಸಿದ್ದ ಕಳ್ಳನ ಬಂಧನ
ನೆಲಮಂಗಲ: ಇತ್ತೀಚೆಗಷ್ಟೆ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ಗ್ರಾಹಕ ಹಾಗೂ ಬ್ಯಾಂಕ್ ಕ್ಯಾಷಿಯರನ್ನು ಯಾಮಾರಿಸಿ ಎರಡು ಲಕ್ಷ ರು.ಗಳನ್ನು ಲಪಟಾಯಿಸಿ ಪರಾರಿಯಾಗಿದ್ದ ಕಳ್ಳನೋರ್ವನನ್ನು ನೆಲಮಂಗಲ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಬಂದಿತ ಆರೋಪಿಯನ್ನು ಮಂಜುನಾಥ ಎಂದು ಗುರುತಿಸಲಾಗಿದೆ. ಬ್ಯಾಂಕ್ನಲ್ಲಿ ಇರಿಸಿದ್ದ ಸಿ.ಸಿ. ಟಿ.ವಿಯಲ್ಲಿ ಸೆರೆಯಾಗಿದ್ದ ದೃಶ್ಯವನ್ನು ಪೊಲೀಸರು ವೀಕ್ಷಿಸಿ ಆರೋಪಿಯನ್ನು ಗುರುತಿಸಿ ಆತನ ಪತ್ತೆಗೆ ಬಲೆ ಬೀಸಿದ್ದು ಆರೋಪಿಯನ್ನು ವಿಜಿಯಪುರದಲ್ಲಿ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.