ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅನಿತಾ ಗೆಲವಿನ ಹಾದಿ ಸುಲಭ: ಕುಮಾರಸ್ವಾಮಿ

Rashmi Kasaragodu
Updated On : 14 Aug 2013, 12:44 pm

ಕ.ಪ್ರ.ವಾರ್ತೆ    ಆನೇಕಲ್ಲು    ಆ.13
ಜೆಡಿಎಸ್ ಬೆನ್ನೆಲುಬಾದ ನೀವು ಸೈನಿಕರಂತೆ ಉಪಚುನಾವಣಾ ಸಮರದಲ್ಲಿ ಗೆಲವನ್ನು ಸಾಧಿಸಲು ಹೋರಾಟ ಮಾಡಬೇಕೆಂದು ವಿರೋಧ ಪಕ್ಷದ ನಾಯಕ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.  ಡಿ ಕುಮಾರ ಸ್ವಾಮಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ಅವರು ತಾಲೂಕಿನ ರಾಜಕೀಯ ಶಕ್ತಿ ಕೇಂದ್ರವಾದ ನಾರಾಯಣ ಟ್ರೀಟ್ಹಾಲ್ನಲ್ಲಿ ಏರ್ಪಡಿಸಿದ್ದ ತಾಲೂಕು ಮುಖಂಡರ ಸಭೆಯಲ್ಲಿ ಮಾತನಾಡಿ ಬೆಂಗಳೂರು ಗ್ರಾಮಾಂತರ ಸಂಸತ್ ಚುನಾವಣೆಯನ್ನು ಸಮರೋಪಾದಿಯಲ್ಲಿ ಸೆಣೆಸಬೇಕು. ಹೋಬಳಿ ಕೇಂದ್ರದಲ್ಲೇ ಕೆಲಸ ಮಾಡಬೇಕಾದ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮನ ತಲುಪಲು ನಿರಂತರ ಶ್ರಮ ಪಡಬೇಕೆಂದರು.
ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸ್ಥಳೀಯ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ ಯಾಚನೆ ಮಾಡಿ ಎಂದು ಮುಖಂಡರಿಗೆ ಕುಮಾರಸ್ವಾಮಿ ಕಿವಿ ಮಾತು ಹೇಳಿದರು. ಮಾಜಿ ಸಚಿವ ನಾರಾಯಣಸ್ವಾಮಿ ಜೊತೆಗಿನ ಭೇಟಿ ಸಫಲವಾಗಿದ್ದು ಬಿಜೆಪಿ ಮುಖಂಡರಿಗೆ ಅವರೇ ಸ್ವತಃ ಸಹಕಾರ ನೀಡಲು ಸೂಚಿಸಿದ್ದಾರೆ. ಬಿಜೆಪಿಯ ಅನೇಕ ಮುಖಂಡರು ಸಂಪರ್ಕದಲ್ಲಿದ್ದು ಈ ಬಾರಿ ಅನಿತಾ ಕುಮಾರಸ್ವಾಮಿ  ಗೆಲವು ಸುಲಭ ವಾಗಲಿದೆ ಎಂದರು.
ಕ್ಷೇತ್ರದ ಶಾಶ್ವತ ಕುಡಿವ ನೀರು ಯೋಜನೆ ಶಿಂಷಾ ಜಾರಿಯಾಗಲು ತಂತ್ರಜ್ಞರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದರು.
ಬೆಂಗಳೂರು ದಕ್ಷಿಣ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಪ್ರಭಾಕರ ರೆಡ್ಡಿ, ಮುನಿನಾರಾಯಣಪ್ಪ, ಗೊಟ್ಟಿಗೆರೆ ಮಂಜಣ್ಣ, ಪುಟ್ಟಣ್ಣ, ತಾಲೂಕು ಅಧ್ಯಕ್ಷ ಶ್ರೀನಾಥರೆಡ್ಡಿ ಜಿಲ್ಲಾ ಮುಖಂಡರ ರಾಮೇಗೌಡ, ಪುರಸಬಾ ಸದಸ್ಯರಾದ ಅಶ್ವತ್ಥನಾರಾಯಣ, ಪದ್ಮನಾಭ, ನಾರಾಯಣಸ್ವಾಮಿ,  ಸುರೇಶ್, ಪಟಾಪಟ್ ರವಿ, ದೇವರಾಜ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement