ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಅಧಿಕಾರ ಇರುವರೆಗೂ ಅಕ್ಕಿ ವಿತರಣೆ: ಸಿದ್ದರಾಮಯ್ಯ

Rashmi Kasaragodu
Updated On : 14 Aug 2013, 12:43 pm

ಕ.ಪ್ರ.ವಾರ್ತೆ    ಕನಕಪುರ    ಆ.13
ರು.1ಕ್ಕೆ 1ಕೆಜಿ ಅಕ್ಕಿ ವಿತರಣೆಯನ್ನು ಲೋಕಸಭೆ ಚುನಾವಣೆವರೆಗೆ ಮಾತ್ರವಲ್ಲದೆ ಕಾಂಗ್ರೆಸ್ ಅಧಿಕಾರ ಇರುವರೆಗೂ ಮುಂದುವರೆಸಲಾಗುವುದು. ಈ ಬಗ್ಗೆ ಅನುಮಾನವೇ ಬೇಡ ಎಂದು ಮರಳವಾಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆದಿದ್ದ ಸಭಿಕರ ಪ್ರಶ್ನೆಗೆ ಸಾವಧಾನದಿಂದಲೇ ಉತ್ತರಿಸಿದರು.  
ಸಿದ್ದರಾಮಯ್ಯ ಭಾಷಣದ ನಡುವೆ ಅಕ್ಕಿ ವಿತರಣೆ ಕಾರ್ಯಕ್ರಮ, ಕ್ಷೇತ್ರದ ನಿರ್ಲಕ್ಷ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡದಿರುವುದೂ ಸಹಿತ ಹಲವಾರು ಪ್ರಶ್ನೆಗಳ ಸುರಿಮಳೆಗರೆಯಲಾಯಿತು. ಸಿದ್ದರಾಮಯ್ಯ ಸಿಡುಕು ಬಿಟ್ಟು, ಸಮಾಧಾನದಿಂದಲೇ ಎಲ್ಲಕ್ಕೂ ಉತ್ತರಿಸಿದರು.
ಮರಳವಾಡಿ ಹೋಬಳಿಯನ್ನು ಒಳಗೊಂಡಿರುವ ರಾಮನಗರ ಕ್ಷೇತ್ರವನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಇನ್ನು, ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವ ವಿಷಯ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ತೀರ್ಮಾನವನ್ನು ಅವಲಂಬಿಸಿದೆ. ಹೈಕಮಾಂಡ್ ಆದೇಶದಂತೆ ನಾನು ನಡೆದುಕೊಳ್ಳುವೆ ಎಂದು ಸ್ಪಷ್ಟಪಡಿಸಿದರು.
ರದ್ದಾಯಿತು ಮೆರವಣಿಗೆ: ಹೋಬಳಿ ಕೇಂದ್ರವಾದ ಹಾರೋಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದ್ಧೂರಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ದಿಢೀರ್ ಸುರಿದ ಮಳೆಯಿಂದಾಗಿ ಮೆರವಣಿಗೆ ರದ್ದುಗೊಂಡಿತು. ಮಳೆ ನಡುವೆಯೇ ಸಿದ್ದರಾಮಯ್ಯ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement