ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗ್ರಾಪಂ ಸದಸ್ಯನಿಂದಲೇ ಜಾತಿ ನಿಂದನೆ: ಗ್ರಾಪಂ ಮಾಸಿಕ ಸಭೆಯಲ್ಲಿ ತರಾಟೆ

Rashmi Kasaragodu
Updated On : 14 Aug 2013, 1:01 am

ಕ.ಪ್ರವಾರ್ತೆ    ಸೂಲಿಬೆಲೆ    ಆ.13
ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಪಂ ನೌಕರನನ್ನು  ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯನೊಬ್ಬ ಜಾತಿ ಹಿಡಿದು ನಿಂದಿಸಿದ ವಿಚಾರ ಸೋಮವಾರ ನಡೆದ ಗ್ರಾಪಂ ಮಾಸಿಕ ಸಭೆಯಲ್ಲಿ ಪ್ರಸ್ತಾಪವಾಗಿದ್ದು ಬಿಜೆಪಿ ಸದಸ್ಯರು ಇದನ್ನು ಗಂಭೀರವಾಗಿ  ತೆಗೆದುಕೊಂಡ ಘಟನೆ ನಡೆಯಿತು.
ಸೂಲಿಬೆಲೆ ಪಟ್ಟಣ ದಿನದಿಂದ ದಿನಕ್ಕೆ ವಾಣಿಜ್ಯ ಮತ್ತು ಜನವಸತಿಯಲ್ಲಿ ಪ್ರಗತಿಯನ್ನು ಕಾಣುತ್ತಿದ್ದು, 8 ವಾರ್ಡುಗಳನ್ನು ಹೊಂದಿದೆ. ಇತ್ತೀಚೆಗೆ ಅಂರ್ತಜಲ ಎಲ್ಲಡೆ ಕಡಿಮೆಯಾಗುತ್ತಿರುವಂತೆ ಸೂಲಿಬೆಲೆ ಪಟ್ಟಣದಲ್ಲಿರುವ ಕೊಳವೆ ಬಾವಿಗಳಲ್ಲಿ ಸಹ ಕಡಿಮೆಯಾಗುತ್ತಿದೆ. ಇರುವ ನೀರನ್ನೇ ಸರಿ ಪ್ರಮಾಣದಲ್ಲಿ ಎಲ್ಲ ವಾರ್ಡುಗಳಿಗೆ ಹಂಚಿಕೆ ಮಾಡಿ ಸರಭರಾಜು ಮಾಡುತ್ತಿದ್ದು, ತಮ್ಮ ವಾರ್ಡುಗೆ ನೀರು ಬಿಡುವ ವಿಚಾರದಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯನೊಬ್ಬ ನೀರು ಸರಬರಾಜುದಾರನಾಗಿರುವ ದಲಿತ ಸಮುದಾಯದ (ವಾಟರ್ಮ್ಯಾನ್)ನನ್ನು ಜಾತಿ ಹಿಡಿದು ನಿಂದಿಸಿರುವ ವಿಚಾರ ಅಧಿಕಾರಿಗಳು ಮತ್ತು ಇತರೇ ಸದಸ್ಯರ ಗಮನಕ್ಕೆ ಬಂದಿದೆ. ಜಾತಿ ಹಿಡಿದು ನಿಂದಿಸಿದ ಪರಿಣಾಮವಾಗಿ ಮಾನಸಿಕವಾಗಿ ನೊಂದ ನರಸಿಂಹಯ್ಯ ತನಗಾದ ನೋವುನ್ನು ತೊಡಿಕೊಂಡಿದ್ದು, ಈ ವಿಚಾರ ಮಾಸಿಕ ಸಭೆಯಲ್ಲಿ ರಾದ್ಧಾಂತಕ್ಕೆ ಕಾರಣವಾಯಿತು. ದಲಿತ ನೌಕರರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಅಧಿಕಾರವಿದೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ದುರಹಂಕಾರದ  ಪರಮಾವಧಿಯಾಗುತ್ತದೆ. ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕೇ ವಿನಃ ತಾನೊಬ್ಬ  ಸದಸ್ಯನೆಂದು ತನ್ನಗಿಷ್ಟ ಬಂದಂತೆ ಮಾತನಾಡಿದರೆ ಯಾರು ಕೈಕಟ್ಟಿಕುಳಿತುಕೊಳ್ಳುವುದಿಲ್ಲ. ಜನ ಆಯ್ಕೆ ಮಾಡಿರುವುದು ಕೆಲಸ ಮಾಡಲಿ ಎಂದೇ ವಿನಃ ದಬ್ಬಾಳಿಕೆ ಮಾಡಲು ಅಲ್ಲ ಎಂದು ಸಭೆಯಲ್ಲಿ ಸದಸ್ಯರು ತರಾಟೆಗೆ ತೆಗೆದುಕೊಂಡು ಮುಂದೆ ಇಂಥ ಘಟನೆಗಳು ಮರಕಳಿಸಿದರೆ ಕಾನೂನು ಕ್ರಮ ಮುಂದಾಗುವಂತೆ ಸದಸ್ಯರು  ಪಿಡಿಒಗೆ ಸೂಚಿಸಿದ್ದಾರೆ.
ಸದಸ್ಯತ್ವ ವಜಾ ಮಾಡಿ: ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸ್ಥಳೀಯ ಅಂಬೇಡ್ಕರ್ ಯುವಕರ ಸಂಘ ಎಲ್ಲ ಜಾತಿಯನ್ನು ಸಮಾನವಾಗಿ ಕಾಣಬೇಕಿರುವ ಚುನಾಯಿತ ಸದಸ್ಯನೊಬ್ಬ ದಲಿತನನ್ನು ಜಾತಿ ಹಿಡಿದು ನಿಂದಿಸಿರುವುದು ಖಂಡನೀಯ.ಈ ವ್ಯಕ್ತಿ ಜನಪ್ರತಿನಿಧಿಯಾಗಿರಲು ಅರ್ಹತೆಯಿಲ್ಲ. ಕೂಡಲೇ ಇತನ ಸದಸ್ಯತ್ವವನ್ನು ರದ್ದುಮಾಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ಇಂಥ ಘಟನೆಗಳು ಮರಕಳಸಿದರೇ ದಲಿತರು ತಕ್ಕ ಪಾಠಕಲಿಸಬೇಕಾದೀತು ಎಂದು ಸಂಘ ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement