ಶಾಲಾ ಕಟ್ಟಡದ ಭೂಮಿ ಪೂಜೆ
ನೆಲಮಂಗಲ: ಪಟ್ಟಣದ ಕೋಟೆಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿ.ಇ.ಎಲ್ ಕಂಪನಿಯವರು ನಿರ್ಮಾಣ ಮಾಡಿಕೊಡುತ್ತಿರುವ ನೂತನ ಶಾಲಾ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವನ್ನು ಆ. 16ರ ಶುಕ್ರವಾರದಂದು ಬೆಳಿಗ್ಗೆ 9-30 ರಿಂದ 10-00 ಗಂಟೆವರೆಗೆ ನಡೆಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ಕೆ.ಶ್ರಿನಿವಾಸಮೂರ್ತಿ ವಹಿಸಲಿದ್ದಾರೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ಸಿ.ಶ್ರೀನಿವಾಸ ತಿಳಿಸಿದ್ದಾರೆ.
ಬೈಕ್ನಲ್ಲಿ ಬಂದು
ಮಾಂಗಲ್ಯ ಅಪಹರಣ
ನೆಲಮಂಗಲ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಶಕುಂತಲ (47) ಎಂಬುವರು ಮನೆಯಿಂದ ಸಮೀಪವಿದ್ದ ಪ್ರಾವಿಜನ್ ಅಂಗಡಿಯಲ್ಲಿ ವ್ಯಾಪಾರ ಮಾಡಲು ಬರುತ್ತಿದ್ದಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಅಪರಿಚಿತರು ಕ್ಷಣ ಮಾತ್ರದಲ್ಲಿ ಸರ ಕಸಿದು ಪರಾರಿಯಾದರು. ಬೈಕ್ ನಂಬರ್ ಸಹ ನೋಡಲು ಸಾಧ್ಯವಾಗದಷ್ಟು ವೇಗವಾಗಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.