ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಲುಬಾಯಿ ರೋಗಕ್ಕೆ ಜಾನುವಾರುಗಳು ಸಾವು

Rashmi Kasaragodu
Updated On : 15 Aug 2013, 1:03 am

ರಾಮನಗರ: ನಗರ ವ್ಯಾಪ್ತಿಯ ಕೊತ್ತೀಪುರ ಬಡಾವಣೆಯಲ್ಲಿ ಕಾಲುಬಾಯಿ ರೋಗಕ್ಕೆ ತುತ್ತಾಗಿ ಜಾನುವಾರುಗಳು ಸಾವನ್ನಪ್ಪಿದ್ದು, ಜಾನುವಾರು ಕಳೆದುಕೊಂಡ ರೈತರಿಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಾನುವಾರು ಮಾಲೀಕರು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.  ಕಳೆದ 15 ದಿನಗಳಿಂದ ಕೊತ್ತೀಪುರದಲ್ಲಿ ಕಾಲುಬಾಯಿ ರೋಗ ಉಲ್ಬಣಿಸಿದ್ದು, 2 ಸೀಮೆ ಹಸುಗಳು, 7 ಎಮ್ಮೆಗಳು ಸಾವನ್ನಪ್ಪಿವೆ. ನೂರಾರು ರಾಸುಗಳಿಗೆ ರೋಗ ಹರಡಿದೆ. ಜೀವನಕ್ಕೆ ಆಶ್ರಯವಾಗಿದ್ದ ರಾಸುಗಳನ್ನು ಕಳೆದುಕೊಂಡ ರೈತರ ಸ್ಥಿತಿ ಹೇಳತೀರದಾಗಿದೆ. ಹೀಗಾಗಿ ತಕ್ಷಣ ಪರಿಹಾರ ವಿತರಣೆಗೆ ಮುಂದಾಗಿ ಎಂದು ಆಗ್ರಹಿಸಿದರು.  ನಿಯೋಗದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಶೀಧರ್ ಹೊಸೂರು, ಟಿ.ಆರ್.ದೇವರಾಜು, ಸಾಗರ, ಜಿ.ಶಿವಣ್ಣ, ರಮಾನಂದಗೌಡ, ಚೆನ್ನಕೇಶವ, ಶಂಭೂಗೌಡ, ರಘುರಾಮ್, ಗ್ರಾಮಸ್ಥರಾದ ವಿಜಯ್‌ಕುಮಾರ್, ಪುಟ್ಟಮಾರಯ್ಯ, ಸೋಮಣ್ಣ, ಗೋಪಾಲ್, ಲಕ್ಷ್ಮಿನಾರಾಯಣ, ಪ್ರಕಾಶ್, ಆಸೀಫ್ ಅಲಿ ಖಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement