ಮಧುಮೇಹ ನಿಯಂತ್ರಣಕ್ಕೆ ಆತ್ಮವಿಶ್ವಾಸ ಅಗತ್ಯ
ಹೊಸಕೋಟೆ: ಮಧುಮೇಹದಿಂದ ಸಂಪೂರ್ಣವಾಗಿ ಮುಕ್ತರಾಗಲು ಸಾಧ್ಯವಿಲ್ಲವಾದರೂ ಆತ್ಮವಿಶ್ವಾಸ ಅಗತ್ಯ ಎಂದು ಪಟ್ಟಣದ ಚೈತನ್ಯ ಆಯುರ್ವೇದ ಆಸ್ಪತ್ರೆಯ ವೈದ್ಯ ಆನಂದ್ ಶೇಡ್‌ಬಾಳ್ ಹೇಳಿದರು.
ಪಟ್ಟಣದ ಚೈತನ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಮಧುಮೇಹ ಸಮಾಲೋಚನಾ ಶಿಬಿರದಲ್ಲಿ ಮಾತನಾಡಿದ ಅವರು, ಮಧುಮೇಹದ ಬಗ್ಗೆ ತಿಳಿವಳಿಕೆಯ ಕೊರತೆಯಿದಾಗಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಮಧುಮೇಹದ ಬಗ್ಗೆ ಮುನ್ಸೂಚನೆ ಕಂಡುಬಂದ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಮುನ್ನೆಚ್ಚರಿಕೆ ಕೈಗೊಂಡು ಸ್ವನಿಯಂತ್ರಣದಿಂದ ಮಾತ್ರ ಮಧುಮೇಹಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ಮಾಡಿದರು. ಪ್ರತಿ ತಿಂಗಳು ಎರಡನೆಯ ಭಾನುವಾರದಂದು ಮಧುಮೇಹಿಗಳಿಗೆ ಉಚಿತ ರಕ್ತ, ಪಾದಸಂವೇದನೆ ಪರೀಕ್ಷೆಯನ್ನು ನೆರವೇರಿಸಲಾಗುವುದು. ದೇಹದಲ್ಲಿ ಸಕ್ಕರೆ ಅಂಶವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು ಅಗತ್ಯ ಸಲಹೆ, ಸೂಚನೆ ಸಹ ನೀಡಲಾಗುವುದು ಎಂದರು.