ದೇಶನಾಯಕರನ್ನು ಸ್ಮರಿಸಿ ಉಗ್ರವಾದವನ್ನು ಧಿಕ್ಕರಿಸಿ
ಕ.ಪ್ರ.ವಾರ್ತೆ ಸೂಲಿಬೆಲೆ ಆ.15
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನೀಯರನ್ನು ಸ್ಮರಿಸಿ ದೇಶದ ಸಮಗ್ರತೆ ಹಾಗೂ ಭದ್ರತೆಗೆ ಧಕ್ಕೆ ಮಾಡಿ ಅಶಾಂತಿಯನ್ನು ಮೂಡಿಸುತ್ತಿರುವ ಉಗ್ರವಾದವನ್ನು ಧಿಕ್ಕರಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಸೂ.ರಂ ರಾಮಯ್ಯ ಕರೆ ನೀಡಿದ್ದಾರೆ.
ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣಿ ಅಂಗವಾಗಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ವಿದ್ಯಾರ್ಥಿಗಳಿಂದ ಕವಾಯಿತ್ ಹಾಗೂ ಗೌರವ ವಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯ ಶಿಕ್ಷಕ ಎಲ್. ನಾಗರಾಜ್ ಸೇರಿದಂತೆ ಆನೇಕ ಗಣ್ಯರು ಹಾಜರಿದ್ದರು.
ಟೌನ್ ಶಾಲೆ: ಪಟ್ಟಣ ಮುಖ್ಯ ನಿಲ್ದಾಣದ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಅಧ್ಯಕ್ಷ ನಾರಾಯಣಪ್ಪ ಧ್ವಜಾರೋಹಣ ನಡೆಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ಮುನಿರಾಜ್ ಮಾತನಾಡಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಗ್ರಾಪಂ ಸದಸ್ಯ ಶಿವಣ್ಣ, ರಾಘವೇಂದ್ರ, ಇಸಾಕ್, ರಾಮಯ್ಯ, ಓಂಕಾರಮ್ಮ, ಚಾಂದ್ ಪಾಷ, ಬಾಬು, ಸೇರಿದಂತೆ ಹಲವರು ಹಾಜರಿದ್ದರು.
ಸಹಕಾರ ಬ್ಯಾಂಕ್: ಇಲ್ಲಿನ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್ ಮೂರ್ತಿ ಧ್ವಜಾರೋಹಣ ನಡೆಸಿದರು. ಸಿಬ್ಬಂದಿ ಹಾಜರಿದ್ದರು. ಆರಕ್ಷಕ ಠಾಣೆಯಲ್ಲಿ ಪಿಎಸ್‌ಐ ರಾಜಣ್ಣ ದ್ವಜಾರೋಹಣ ನಡೆಸಿದರು. ಪಿಯು ಕಾಲೇಜು, ಜನತಾ ಕಾಲೊನಿ ಸರ್ಕಾರಿ ಶಾಲೆ, ಪದವಿ ಕಾಲೇಜು, ಗ್ರಾಪಂಗಳಲ್ಲಿ ಸ್ವಾತಂತ್ರ್ಯ ದಿನಾಚರಣಿ ನಡೆಯಿತು.
ಬೆಟ್ಟಹಳ್ಳಿ ಶಾಲೆ: ಹೋಬಳಿ ಬೆಟ್ಟಹಳ್ಳಿ ಗ್ರಾಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಧ್ವಜಾರೋಹಣ ನಡೆಸಿದರು. ರಾಮಕೃಷ್ಣಪ್ಪ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆದ್ದವರಿಗೆ ಹೇಮಂತ್ ಬಹುಮಾನಗಳನ್ನು ನೀಡಿದರು. ಮುಖ್ಯ ಶಿಕ್ಷಕ ಶ್ರೀನಿವಾಸ್, ಗ್ರಾ.ಪಂ ಸದಸ್ಯರು ಶ್ರೀನಿವಾಸ್, ನಾಗೇಶ್, ನಿವೃತ್ತ ಶಿಕ್ಷಕ ದೇವದಾಸ್ ಸುಬ್ರಾಯ್ ಸೇಠ್, ಮೊದಲಾದವರು ಹಾಜರಿದ್ದರು.
ಗಿಡ್ಡಪ್ಪಹಳ್ಳಿಯಲ್ಲಿ: ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೊಸಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಧ್ವಜಾರೋಹಣ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ಚನ್ನಕೇಶವ, ಮುಖಂಡ ಲೋಕೇಶ್ ಇತರರು ಹಾಜರಿದ್ದರು.
ಇಲ್ಲಿನ ಗ್ರಾಪಂ ಆವರಣದಲ್ಲಿ ಗ್ರಾಪಂ ಅಧ್ಯಕ್ಷ ಸೀನಪ್ಪ ಧ್ವಜಾರೋಹಣ ನಡೆಸಿದರು. ಸದಸ್ಯರು ಹಾಜರಿದ್ದರು.ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.