ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಲಿಷ್ಠ ಭಾರತ ನಿರ್ಮಾಣ ಸಂಕಲ್ಪ ಮಾಡಿ: ಶಿವೇಗೌಡ

Rashmi Kasaragodu
Updated On : 16 Aug 2013, 1:16 am

ಕ.ಪ್ರ.ವಾರ್ತೆ ಟಿ ಆನೇಕಲ್ಲು ಟಿ ಆ.15
ಪುಣ್ಯ ಪುರುಷರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ ಲಭಿಸಿದ್ದು ಸ್ವಾರ್ಥ ಹಾಗೂ ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣ ಎಲ್ಲರ  ಜವಾಬ್ದಾರಿಯಾಗಿದೆ ಎಂದು ತಾಲೂಕು ದಂಡಾಧಿಕಾರಿ ಎಚ್.ಎನ್. ಶಿವೇಗೌಡ ತಿಳಿಸಿದ್ದಾರೆ.
ಅವರು ನಾಡ ಹಬ್ಬಗಳ ಸಮಿತಿ ಹೊಸ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ 67ನೆಯ ಸ್ವಾತಂತ್ರ್ಯೋತ್ಸವಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯ ರಕ್ಷಣಾ ಕಾಯಿದೆಯಿಂದಾಗಿ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ದೇಶವಾಸಿಗಳು ಶ್ರಮಿಸಬೇಕು ಎಂದರು.
ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ ಮಾತನಾಡಿ ಚೀನಾ ದೇಶ ಭಾರತಕ್ಕಿಂತ ಮುಂದುವರಿದ ರಾಷ್ಟ್ರವಾಗಿದ್ದು ಆರ್ಥಿಕವಾಗಿ ಸಧೃಢವಾಗಿದೆ ಎಂದರು.
ಶಾಸಕ ಶಿವಣ್ಣ ಮಾತನಾಡಿ ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಉಪ ಚುನಾವಣಾ ಫಲಿತಾಂಶ ನಂತರ ಎಲ್ಲ ಕಾಮಗಾರಿಗಳೂ ಪುನಾರಂಭವಾಗಲಿದೆ ಎಂದರು.
ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಗವಿರಂಗಯ್ಯ ಸ್ವಾಗತ ಕೋರಿದರು. ಮಾಜಿ ಅಧ್ಯಕ್ಷ ಸಿ. ಆರ್. ನಾಗಭೂಷಣ್ ನಿರೂಪಣೆ ಹಾಗೂ ವಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಅಧಿಕಾರಿ ವರ್ಗ ಹಾಗೂ ಚುನಾಯಿತ ಪ್ರತಿನಿಧಿಗಳಿದ್ದರು. ವಿವಿಧ ಶಾಲಾ ಮಕ್ಕಳು ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement