ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಯಲ್ಲಿ 3ಕ್ಕೆ ಕೊಡ ನೀರು!

Rashmi Kasaragodu
Updated On : 17 Aug 2013, 1:12 am

ದೇವನಹಳ್ಳಿ :ದೇವನಹಳ್ಳಿ ಪಟ್ಟಣದ ಮಹಿಳೆಯರಿಗೆ ವರಮಹಾಲಕ್ಷ್ಮಿ ಹಬ್ಬದಂದು ಒಂದು ಬಿಂದಿಗೆ ನೀರಿಗೆ ಮೂರು ರು.ಕೊಟ್ಟು  ಹಬ್ಬ ಮಾಡಬೇಕಾದ ಪರಿಸ್ಥಿತಿ ಬಂದಿದೆ.
  ಚುನಾವಣೆ ಸಂದರ್ಭದಲ್ಲಿ ನಮ್ಮಿಂದ ಓಟು ಪಡೆದ ಪುರಸಭಾ ಸದಸ್ಯರು ನೀರಿನ ಬವಣೆ ನೀಗಿಸುತ್ತೇವೆ ಎಂದು ಹೇಳುತ್ತಾರೆ, ಓಟು ಪಡೆದು ಚುನಾಯಿತರಾದ ಮೇಲೆ ಒಮ್ಮೆಯೂ ಈ ಕಡೆ ಬಂದಿಲ್ಲ ಎಂದು ಹಣ ಕೊಟ್ಟು ಬಿಂದಿಗೆಗಳಲ್ಲಿ ನೀರನ್ನು ಪಡೆದ ಮಹಿಳೆಯರು ತಿಳಿಸಿ ಈಗಲಾದರೂ ಅಗತ್ಯವಾದ ಕುಡಿಯುವ ನೀರನ್ನಾದರೂ ಸರಬರಾಜು ಮಾಡಲಿ, ಕುಡಿಯುವ ನೀರಿಗೆ ನಾವು ಎಲ್ಲಿಂದ ಹಣ ತರಲಿ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಬೆಂಬಲಿಸಿ: ಅಲ್ಪಸಂಖ್ಯಾತರಿಗೆ ಕರೆ
ಚನ್ನಪಟ್ಟಣ: ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಸೆಳೆಯಲು ಜಾತ್ಯತೀತತೆಯ ಮುಖವಾಡ ಧರಿಸಿ ಬರುವ ಜೆಡಿಎಸ್ನ ನಯವಂಚಕತನ ಈ ಉಪ ಚುನಾವಣೆಯಲ್ಲಿ ಅನಾವರಣ ಗೊಂಡಿದ್ದು ಅಲ್ಪ ಸಂಖ್ಯಾತರು ಯಾವುದೇ ಕಾರಣಕ್ಕೂ ಜೆಡಿಎಸ್ ಬೆಂಬಲಿಸ ಬಾರದೆಂದು ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಹರ್ಷದ್ ಕರೆನೀಡಿದರು. ಪಟ್ಟಣದ ಮುಸ್ಲಿಂ ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ  ಜೆಡಿಎಸ್ ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿದೆ ಎಂದರು. ತಾಲೂಕು ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ, ಚೌದರಿ ಫಯಾಜ್, ಶೇಖ್ ಖಾದರ್, ಸೈಯ್ಯದ್ ನಿಸಾರ್, ನಗರಸಭಾ ಸದಸ್ಯರಾದ ಜಕಿ ಅಹ್ಮದ್, ಲಿಯಾಖತ್ ಆಲಿಖಾನ್, ಸೈಯ್ಯದ್ ಅಕ್ಬರ್, ರಿಯಾಜುದ್ದೀನ್ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement