ನಾಳೆ ಜೆಡಿಎಸ್ ಸಭೆ
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಆವತಿ ಬಳಿ ಇರುವ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ತಾಲೂಕು ಅಧ್ಯಕ್ಷರಾದ ಮುನಿಶಾಮಯ್ಯರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರದಾನ ಕಾರ್ಯದರ್ಶಿ ಜಿ.ಎ.ರವೀಂದ್ರ ತಿಳಿಸಿದ್ದಾರೆ. ಈ ಕಾರ್ಯಕರ್ತರ ಸಭೆಗೆ ಶಾಸಕರಾದ ಪಿಳ್ಳಮುನಿಶಾಮಪ್ಪ, ಹಿರಿಯರಾದ ಆರ್.ಎನ್.ಕೃಷ್ಣಮೂರ್ತಿ, ಹಾಡೋನಹಳ್ಳಿಯ ಅಪ್ಪಯ್ಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಬಿ.ಎಂ.ಬೀರಪ್ಪ, ನಳಿನಾ ಮುನಿರಾಜು, ಮಾಜಿ ಶಾಸಕರಾದ ಪಿ.ಸಿ.ಮುನಿಸಾಮಯ್ಯ, ತಾ.ಪಂ. ಅಧ್ಯಕ್ಷರಾದ ರಾಧಿಕಾ ತ್ಯಾಗರಾಜ್, ಕಾರ್ಯಾಧ್ಯಕ್ಷರಾದ ಆರ್.ಮುನೇಗೌಡ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ಸಿ.ಮುನಿರಾಜು ಹಾಗೂ ಎಲ್ಲ ಪ್ರಮುಖ ಕಾರ್ಯಕರ್ತರು ಭಾಗವಹಿಸಲಿದ್ದು ಈ ಸಭೆಯಲ್ಲಿ ಪಕ್ಷದ ಸಂಘಟನೆ ಹಾಗೂ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಚರ್ಚೆಯಾಗಲಿವೆ ಎಂದು ತಿಳಿಸಿದ್ದಾರೆ.