ರಾಷ್ಟ್ರಾಭಿವೃದ್ಧಿಯಲ್ಲಿ ಯುವಕರ ಪ್ರಮುಖ ಪಾತ್ರ: ಶಾಸಕ
ಹೊಸಕೋಟೆ: ಯುವಕರು ರಾಷ್ಟ್ರಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ್ದು ಇಂದಿನ ಪರಿಸ್ಥಿತಿಯಲ್ಲಿ
ಅತ್ಯವಶ್ಯವಾಗಿದೆ ಎಂದು ಶಾಸಕ ಎನ್. ನಾಗರಾಜ್ ಹೇಳಿದರು.
ಅವರು ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರದ ಭದ್ರತೆ, ಐಕ್ಯತೆಗೆ ನೆರೆ ರಾಷ್ಟ್ರಗಳಿಂದ ತೀವ್ರ ಧಕ್ಕೆ ಉಂಟಾಗುತ್ತಿದ್ದುನ್ನು ನಿಗ್ರಹಿಸಲು ಪಣತೊಬೇಕಾಗಿದೆ ಎಂದರು.
ತಹಸೀಲ್ದಾರ್ ಬಿ.ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಪ್ರಸಾದ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಆಂಜಿನಪ್ಪ, ಸಹ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಕ್ಷರ ಫೌಂಡೇಶನ್ ತಾಲೂಕಿನ ಸರಕಾರಿ ಶಾಲೆಗಳ ಗ್ರಂಥಾಲಯಕ್ಕೆ ಆಂಗ್ಲ ಮಾಧ್ಯಮ ಬೋಧನೆಗೆ ಸಹಕಾರಿಯಾದ 10ಲಕ್ಷ ರು..ಗಳ ಮೌಲ್ಯದ 40ಸಾವಿರ ಪುಸ್ತಕಗಳನ್ನು ನೀಡಲು ಉದ್ದೇಶಿಸಿದ್ದು, ಸಾಂಕೇತಿಕವಾಗಿ ವಿತರಿಸುವ ಮೂಲಕ ಚಾಲನೆ ನೀಡಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸೌಜಜ್ಯ, ಮಮತಾರಿಗೆ 10ಸಾವಿರ ರು.ಗಳ ನಗದು ಬಹುಮಾನ ವಿತರಿಸಲಾಯಿತು. ಪಟ್ಟಣದ 19ಸಾವಿರ ವಿದ್ಯಾರ್ಥಿಗಳಿಗೆ ಉಪನೋಂದಣಾಧಿಕಾರಿಗಳ ಕಚೇರಿಯಿಂದ ಸಿಹಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರ ವಿದ್ಯಾರ್ಥಿಗಳಿಗೆ ಯೋಜನಾ ಪ್ರಾದಿಕಾರದ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇಓ ದ್ಯಾಮಣ್ಣ, ಬಿಇಓ ವಿ.ಸಿ.ಬಸವರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಎಸ್.ಅಂಬಿಕ, ಮುಖಂಡರಾದ ಮುನಿಶಾಮಣ್ಣ, ಕೆಂಪಯ್ಯ, ಕಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.
ನಾನಾ ಕಾರ್ಯಕ್ರಮಗಳಲ್ಲಿ ಬಹುಮಾನ ಪಡೆದ ಶಾಲೆಗಳು: ಪಥಸಂಚಲನ: ಸರಕಾರಿ ಬಾಲಕರ ಪ್ರೌಢ ಶಾಲೆ(ಪ್ರಥಮ) ಎಸ್ಬಿ ಶಾಲೆ(ದ್ವಿತೀಯ) ಭಾರತ್ ಮಾತಾ(ತೃತೀಯ) , ವಾದ್ಯಗೋಷ್ಠಿ ಎಸ್ಬಿ ಶಾಲೆ(ಪ್ರಥಮ) ವಿವೇಕಾನಂದ ಶಾಲೆ(ದ್ವಿತೀಯ) ಸರಕಾರಿ ಬಾಲಕರ ಪ್ರೌಢಶಾಲೆ(ತೃತೀಯ) ಸಾಂಸ್ಕೃತಿಕ ಕಾರ್ಯಕ್ರಮಣ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ವಿನಾಯಕ ಪ್ರೌಢಶಾಲೆ(ಪ್ರಥಮ) ವಿವೇಕಾನಂದ ಶಾಲೆ(ದ್ವಿತೀಯ) ಸಿಟಿಜನ್ ಶಾಲೆ (ತೃತೀಯ).