ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಜೃಂಭಣೆ ಸ್ವಾತಂತ್ರ್ಯೋತ್ಸವ, ಮಕ್ಕಳ ನೃತ್ಯ

Rashmi Kasaragodu
Updated On : 17 Aug 2013, 1:12 am

ಕನಕಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ತಹಸೀಲ್ದಾರ್ ಡಾ.ದಾಕ್ಷಾಯಣಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಧ್ವಜವಂದನೆಯನ್ನು ಸ್ವೀಕರಿಸಿದರು. ಎನ್ಸಿಸಿ, ಸ್ಕೌಟ್, ಗೈಡ್ ಹಾಗೂ ವಿವಿಧ ಶಾಲಾ ತಂಡಗಳು ವಾದ್ಯಗೋಷ್ಠಿಗಳೊಂದಿಗೆ ಧ್ವಜವಂದನೆಯನ್ನು ಸಲ್ಲಿಸಿದರು. ಶಾಲಾಮಕ್ಕಳಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮ ನಡೆಯಿತು.
ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದ ಡಾ.ದಾಕ್ಷಾಯಣಿ, ಆಂಗ್ಲರ ದಾಸ್ಯದಿಂದ ಹೊರಬರಲು ಅನೇಕ ಶತಮಾನಗಳ ಕಾಲ ನಡೆಸಿದ ಹೋರಾಟದ ಅರಿವು ಇಂದಿನ ಯುವಜನಾಂಗ ಅರಿತುಕೊಳ್ಳಬೇಕಾಗಿದೆ, ಸ್ವಾತಂತ್ರೋತ್ಸವ ಕೇವಲ ಆಚರಣೆಯಾಗಿ ಉಳಿಯಬಾರದು, ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನಗಳನ್ನು ಅರಿತುಕೊಳ್ಳುವ ಗೌರವಿಸುವ ಸಮಾರಂಭ ವಾಗಬೇಕು. ಎಲ್ಲರೂ ತಪ್ಪದೇ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
 ಸಮಾರಂಭದ ಮುಖ್ಯ ಅತಿಥಿಗಳಾಗಿ ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ. ನಾಯಕ್, ಆರಕ್ಷಕ ವೃತ್ತನಿರೀಕ್ಷಕ ಧನಂಜಯ, ಕ್ಷೇತ್ರಶಿಕ್ಷಣಾಧಿಕಾರಿ ಡಿ.ಶಿವಕುಮಾರ್, ಉಪ ಅರಣ್ಯಸಂರಕ್ಷಣಾಧಿಕಾರಿ ಸತ್ಯನಾರಾಯಣ, ವಲಯ ಅರಣ್ಯಾಧಿಕಾರಿ ಸುನೀತಾಬಾಯಿ, ತಹಸೀಲ್ದಾರ್ ಬಸವರಾಜು, ಜಿಪಂ ಅಭಿಯಂತರ ಗುರುಸ್ವಾಮಿ, ಲೋಕೋಪಯೋಗಿ ಅಭಿಯಂತರ ಪ್ರಕಾಶ್, ಜಲಾನಯನ ಅಭಿವೃದ್ಧಿ ಅಧಿಕಾರಿ ಹುಚ್ಚಪ್ಪ, ಸ್ವಾತಂತ್ರ್ಯಸೇನಾನಿ ನಿಂಗಯ್ಯ ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣಾಧಿಕಾರಿ ಮೋಹನರಾಜೇ ಅರಸ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಡಿ.ಎಸ್.ಸತೀಶ್ ನಿರೂಪಿಸಿದರು. ಕಂದಾಯ ಅಧಿಕಾರಿ ಚೇತನ್ ವಂದಿಸಿದರು.
ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ:  ಕನಕಪುರದ ತಾಲೂಕು ಆಡಳಿತ ಸ್ವಾತಂತ್ರ್ಯ ದಿನಾಚರಣೆ ಪ್ರಚುರಪಡಿಸಲು ಪ್ರದರ್ಶಿಸಿದ್ದ ಭಿತ್ತಿಚಿತ್ರಗಳಲ್ಲಿ ಫ್ಲೆಕ್ಸ್ಗಳಲ್ಲಿ 65ನೇ ಸ್ವಾತಂತ್ರ್ಯ ದಿನಾಚರಣೆ ಎಂದು ನಮೂದಾಗಿ ತಾಲೂಕು ಕ್ರೀಡಾಂಗಣದ ಪ್ರವೇಶದಲ್ಲಿ ಪ್ರದರ್ಶಿಸಲಾಗಿತ್ತು. ಪ್ರಮಾದ ಅರಿವಾದ ತಕ್ಷಣವೇ ಅದನ್ನು 66ನೇ ದಿನಾಚರಣೆ ಎಂದು ಮಾರ್ಪಡಿಸಲಾಯಿತು. ವೇದಿಕೆಯ ಮೇಲೂ 66ನೇ ದಿನಾಚರಣೆ ಎಂದೇ ನಮೂದಾಗಿತ್ತು. ಈ ಹಿಂದೆ ಆಹ್ವಾನಪತ್ರಿಕೆಗಳಲ್ಲೂ 65ನೇ ಸ್ವಾತಂತ್ರ್ಯ ದಿನಾಚರಣೆ ಎಂದೇ ಮುದ್ರಣಗೊಂಡು ನಂತರ ತುರ್ತಿನಲ್ಲಿ ಆಹ್ವಾನಪತ್ರಿಕೆಗಳನ್ನು ಮರುಮುದ್ರಿಸಲಾಯಿತು. ಸಾರ್ವಜನಿಕರಲ್ಲಿ ತಾಲೂಕು ಆಡಳಿತದ ನಿರ್ಲಕ್ಷ್ಯ ವ್ಯಾಪಕ ಚರ್ಚೆಯಾಗುತ್ತಿತ್ತು. ದಿನಾಚರಣೆಯಲ್ಲಿ ಸರ್ಕಾರಿ ಅಧಿಕಾರಿಗಳ ಹಾಜರಾತಿಯ ಕೊರತೆ ಎದ್ದು ಕಾಣುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement