ಹಸಿವು ಮುಕ್ತ ಆಯ್ತು, ಇನ್ನು ಗುಡಿಸಲು ಮುಕ್ತ: ಸಿಎಂ
ಕ.ಪ್ರ.ವಾರ್ತೆ ಟಿ ಆನೇಕಲ್ಲು ಟಿ ಆ. 16
ಹಸಿದ ಹೊಟ್ಟೆಗೆ ಒಂದು ಹೊತ್ತು ಹೊಟ್ಟೆ ತುಂಬಾ ಅನ್ನ ನೀಡುವ ಯೋಜನೆ ಜಾರಿಯಾಯಿತು. ಇನ್ನು ಮುಂದೆ ವರ್ಷಕ್ಕೆ 3 ಲಕ್ಷ ಮನೆಗಳನ್ನು ನಿರ್ಮಿಸಿ ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಕನಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಆನೇಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣಾ ಸಂಬಂಧ ಶ್ರೀ ರಾಮ ಕುಟೀರದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಸಹಸ್ರಾರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ ಮುಖ್ಯ ಮಂತ್ರಿಯಾಗಿ ಆಧಿಕಾರಿ ವಹಿಸಿಕೊಂಡ ಅರ್ಧ ಗಂಟೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರು. 1 ರಂತೆ 30 ಕೆಜಿ ಅಕ್ಕಿ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳ ಹಸಿವು ಕಡಿಮೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದಿಂದ ಗೋಧಿ, ರಾಗಿ, ನವಣೆ ಹಾಗೂ ಜೋಳವು ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಿ 2 ಹೊತ್ತು ಹೊಟ್ಟೆ ತುಂಬಾ ಊಟ ಸಿಗುವಂತೆ ಮಾಡುವುದು ನನ್ನ ಗುರಿಯಾಗಿದೆ. ಕಾಂಗ್ರೆಸ್ ಅಬ್ಯರ್ಥಿ ಡಿ. ಕೆ. ಸುರೇಶ್ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಬೇಕೆಂದು ಕೋರಿದರು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕೇಂದ್ರ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದೆ ತೇಜಸ್ವಿನಿ ಗೌಡ, ಸಿ. ನಾರಾಯಣಸ್ವಾಮಿ, ಮೇಲ್ಮನೆ ಸದಸ್ಯ ಬಿ. ಟಿ. ದಯಾನಂದ ರೆಡ್ಡಿ, ಶಾಸಕ ಬಿ. ಶಿವಣ್ಣ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ, ಗೋಪಾಲ್, ಪುರಸಭಾ ಸದಸ್ಯರಾದ ಪಿ. ಶಂಕರ್ ಕುಮಾರ್, ಅರ್ಜುನ್, ಸುರೇಶ್, ಜಿಪಂ ಸದಸ್ಯ ಕೆ.ಸಿ. ರಾಮಚಂದ್ರ, ಅರುಣಾ ನಾರಾಯಣಸ್ವಾಮಿ, ಕೆ.ಪಿ.ಸಿ.ಸಿ. ಜಿಗಣಿ ಕೃಷ್ಣಪ್ಪ ಇತರರು ಇದ್ದರು.