8 ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾಧಿಕಾರಿ ನೇಮಕ
ಕ.ಪ್ರ.ವಾರ್ತೆ ರಾಮನಗರ ಆ. 17
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದು, ರಾಮನಗರ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಡಾ.ಎಂ.ಎನ್. ರಾಜೇಂದ್ರ ಪ್ರಸಾದ್ ನೇಮಕವಾಗಿದ್ದಾರೆ.
ರಾಜೇಂದ್ರ ಪ್ರಸಾದ್ ಅವರ ಮೊ. 9449817984, ಕಚೇರಿ ದೂ. 080- 27271229 ಆಗಿದೆ. ಕುಣಿಗಲ್ ಕ್ಷೇತ್ರಕ್ಕೆ ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ. ಅನುಪಮ್ ಸಹಾಯಕ ಚುನಾವಣಾಧಿಕಾರಿ ಆಗಿದ್ದು, ಅವರ ಮೊ. 9448342649 ಆಗಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಆಯುಷ್ ಇಲಾಖೆ ಅಧಿಕಾರಿ ಕೆ.ಜ್ಯೋತಿ ಸಹಾಯಕ ಚುನಾವಣಾಧಿಕಾರಿ. ಅವರ ಮೊ. 9900118421, ಕಚೇರಿ ದೂ. 080- 22874595. ಬೆಂಗಳೂರು ದಕ್ಷಿಣಕ್ಕೆ ನೇಮಕವಾಗಿರುವ ಉಪ ವಿಭಾಗಾಧಿಕಾರಿ ಎಲ್.ಸಿ. ರಾಜು ಅವರ ಮೊ. 9448089753. ಕಚೇರಿ ದೂ. 080-22210076.
ಆನೇಕಲ್ ಕ್ಷೇತ್ರಕ್ಕೆ ನಿಯೋಜಿತರಾಗಿರುವ ವಿಶೇಷ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಮೊ. 9480832135. ಕಚೇರಿ ದೂ. 080- 27859234. ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಡಿಯುಡಿಸಿ ಯೋಜನಾ ನಿರ್ದೇಶಕಿ ಎಂ.ಎಲ್. ವೈಶಾಲಿ ಅವರ ಮೊ. 9449759069 ಮತ್ತು ಕಚೇರಿ ದೂ. 080-27745233.
ಕನಕಪುರ ಕ್ಷೇತ್ರಕ್ಕೆ ನೇಮಕಗೊಂಡಿರುವ ಜಿಪಂ ಸಿಇಒ ಡಾ. ಎಂ.ವಿ. ವೆಂಕಟೇಶ್ ಅವರ ಮೊ. 9880640449. ಚನ್ನಪಟ್ಟಣದ ಸಹಾಯಕ ಚುನಾವಣಾಧಿಕಾರಿ ಆಗಿರುವ ವಿಶೇಷ ಭೂ ಸ್ವಾಧೀನಾಧಿಕಾರಿ ಪಿ.ಜಯಮಾಧವ ಅವರ ಮೊ. 9448888282, ಕಚೇರಿ ದೂ. 080-2772946.
ತರಬೇತಿ ಕಾರ್ಯಕ್ರಮ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶನಿವಾರ ಅಂತಿಮ ಹಂತದ ತರಬೇತಿಯನ್ನು ವಿಧಾನಸಭಾ ಕ್ಷೇತ್ರವಾರು ನೀಡಲಾಯಿತು.
ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ 8 ವಿಧಾನಸಭಾ ಕ್ಷೇತ್ರಗಳ 2411 ಮತಗಟ್ಟೆ ಅಧಿಕಾರಿಗಳು, ಸಹಾಯಕರು ಮತ್ತು ಪೊಲೀಸ್ ಸಿಬ್ಬಂದಿ ಸಹಿತ 7388 ನೌಕರರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್ ನೇತೃತ್ವ ವಹಿಸಿದ್ದರು.
ನಿಯೋಜನೆಗೊಂಡ ಸಿಬ್ಬಂದಿಯನ್ನು ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಕರೆತಂದು, ವಾಪಸ್ ಕರೆದೊಯ್ದು ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಾ 276 ಮತಗಟ್ಟೆ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಮತ್ತು 319 ಸಿಬ್ಬಂದಿಗೆ ಅಲ್ಲಿನ ಸಹಾಯಕ ಚುನಾವಣಾಧಿಕಾರಿ ಎಂ.ಎಲ್. ವೈಶಾಲಿ ಹಾಗೂ ತಹಸೀಲ್ದಾರ್ ಡಾ.ಬಿ.ಆರ್. ಹರೀಶ್ ತರಬೇತಿ ನೀಡಿದರು.
ರಾಮನಗರ ಕ್ಷೇತ್ರಕ್ಕೆ 1207, ಕನಕಪುರಕ್ಕೆ 1164, ಚನ್ನಪಟ್ಟಣಕ್ಕೆ 1036, ಕುಣಿಗಲ್ ಕ್ಷೇತ್ರಕ್ಕೆ 1156, ರಾಜರಾಜೇಶ್ವರಿ ನಗರಕ್ಕೆ 1320 ಬೆಂಗಳೂರು ದಕ್ಷಿಣಕ್ಕೆ 1668, ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೆ 1096 ಸಿಬ್ಬಂದಿ ಅಗತ್ಯವಿದ್ದು, ನಿಯೋಜಿಸಿಕೊಂಡು ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ತಿಳಿಸಿದ್ದಾರೆ.