ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿ ಆಧರಿಸಿ ಮತ ಹಾಕಿ: ಮಾಜಿ ಸಚಿವ ಕಾಶೆಂಪುರ್

Rashmi Kasaragodu
Updated On : 18 Aug 2013, 1:14 am

ಚನ್ನಪಟ್ಟಣ: ಕುರುಬ ಸಮಾಜದ ಮತದಾರರು ಜೆಡಿಎಸ್ ಬೆಂಬಲಿಸಲಿದ್ದು, ಅಭಿವೃದ್ಧಿ ಆಧರಿಸಿ ಮತ ಚಲಾಯಿಸಲಿದ್ದಾರೆ ಎಂದು ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಬಂಡೆಪ್ಪ ಕಾಶೆಂಪುರ್ ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕಿನ ಕುರುಬರ ಸಂಘದ ಕಚೇರಿಯಲ್ಲಿ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕಾರಣಕ್ಕೆ ಹಿಂದುಳಿದ ವರ್ಗಗಳ ಸಮಸ್ಯೆ ಎಲ್ಲಾ ಮುಗಿಯುವುದಿಲ್ಲ ಎಂದರು.
ಸ್ಥಳೀಯವಾಗಿ ಕುರುಬ ಸಮುದಾಯ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳು ಜೆಡಿಎಸ್ ಬೆಂಬಲಿಸಲಿದ್ದು, ಇವರ ಕಷ್ಟ- ಸುಖಗಳಿಗೆ ಈ ಭಾಗದಲ್ಲಿ ಜೆಡಿಎಸ್ ಸ್ಪಂದಿಸುತ್ತಿದೆ ಎಂದರು.ಜೆಡಿಎಸ್ ಮುಖಂಡ ಸಿಂ.ಲಿಂ. ನಾಗರಾಜು, ಕುರುಬ ಸಮುದಾಯದ ಮುಖಂಡರಾದ ಮಹೇಶ್ ದ್ಯಾವಾಪಟ್ಣ, ರೇಣುಕಯ್ಯ, ಬೀರಪ್ಪ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement