ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಚ್‌ಎಫ್ ತಳಿಯ ಕರುಗಳ ಪ್ರದರ್ಶನ

Rashmi Kasaragodu
Updated On : 18 Aug 2013, 1:29 am

ದೇವನಹಳ್ಳಿ: ಕರ್ನಾಟಕ ಹಾಲು ಮಹಾ ಮಂಡಳಿ, ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ಹಾಗೂ ನಲ್ಲಪ್ಪನಹಳ್ಳಿ ಹಾಲು ಡೇರಿ ಸಂಯುಕ್ತ ಆಶ್ರಯದಲ್ಲಿ ಪೀಳಿಗೆ ಪರೀಕ್ಷೆ ಯೋಜನೆಯ ಕರುಗಳ ಪ್ರದರ್ಶನ ಶನಿವಾರ ನಲ್ಲಪ್ಪನಹಳ್ಳಿಯಲ್ಲಿ ಆಯೋಜಿಸಲಾಗಿತ್ತು.
 ಉದ್ಘಾಟನೆಯನ್ನು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕರಾದ ಎ. ಸೋಮಣ್ಣ ಅವರು ನೆರವೇರಿಸಿ, ಕರ್ನಾಟಕದಲ್ಲಿ ಎಚ್‌ಎಫ್ ತಳಿಯ ಹಸುಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ರಾಷ್ಟ್ರೀಯ ಹೈನು ಯೋಜನೆಯ ಪೀಳಿಗೆ ಪರೀಕ್ಷಾ ವಿಧಾನ 2008 ರಿಂದಲೇ ಕಾರ್ಯಾಚರಣೆಗೆ ಪ್ರಾರಂಭಿಸಿದ್ದು, 2018 ರವರೆಗೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು. ರೈತರು ತಮ್ಮ ಕರುಗಳಿಗೆ ಪಶು ವೈದ್ಯರು ಸೂಚಿಸಿದಂತೆ ಸಮತೋಲನ ಪಶು ಆಹಾರ ನೀಡಿದರೆ ಮಾತ್ರ ಕರುಗಳು 20 ತಿಂಗಳಲ್ಲಿ ಬೆದೆಗೆ ಬರುತ್ತವೆ ಎಂದರು. ಉತ್ತಮ ಸಮತೋಲನ ಆಹಾರ ರಾಸುಗಳಿಗೆ ನೀಡಿದರೆ ಗುಣಮಟ್ಟದ ಹಾಲನ್ನು ಪಡೆಯಬಹುದಾಗಿದೆ ಎಂದು ಹಾಲು ಒಕ್ಕೂಟ ವ್ಯವಸ್ಥಾಪಕರಾದ ಡಾ.ಬಿ.ಕೆ. ಜಗದೀಶ್ ತಿಳಿಸಿದರು. ಡಾ.ವಿಶ್ವನಾಥರೆಡ್ಡಿ, ಡಾ.ಗಂಗಯ್ಯ ಮಾತನಾಡಿದರು. ಅಧ್ಯಕ್ಷತೆಯನ್ನು ಹಾಲು ಡೇರಿ ಅಧ್ಯಕ್ಷರಾದ ಬೈರಪ್ಪ ವಹಿಸಿದ್ದರು. ರೈತರು ಸಾಕುತ್ತಿರುವ 73 ಎಚ್‌ಎಫ್ ಕರುಗಳು ಪ್ರದರ್ಶನದಲ್ಲಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement