ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗಂಡನ ಮನೆ ಕಿರುಕುಳ, ಕಲಹ; ಗೃಹಿಣಿ ಆತ್ಮಹತ್ಯೆ

Rashmi Kasaragodu
Updated On : 18 Aug 2013, 1:17 am

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕದಿರೇನಹಳ್ಳಿ ನಿವಾಸಿ ಸ್ಮಿತಾ (23) ಶನಿವಾರ ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನಪಟ್ಟಣ ಮೂಲದ ಸ್ಮಿತಾ ಹಾಗೂ ಇಸ್ರೋ ನೌಕರ ವಿಶ್ವನಾಥ್ ಅವರ ವಿವಾಹ 3 ವರ್ಷದ ಹಿಂದೆ ನೆರವೇರಿತ್ತು. ದಂಪತಿಗೆ ಸಿಂಚನ ಎಂಬ ಒಂದು ವರ್ಷದ ಮಗು ಇದೆ.
ಈ ನಡುವೆ ಸ್ಮಿತಾ ತನ್ನ ಅತ್ತೆಯ ಕಿರುಕುಳ ತಾಳದೆ ಬೇರೆ ಮನೆ ಮಾಡಲು ಪತಿಯನ್ನು ಒತ್ತಾಯಿಸುತ್ತಿದ್ದರು. ಆದರೆ, ಪತಿ ವಿರೋಧ ವ್ಯಕ್ತಪಡಿಸಿದ್ದರಿಂದ ಮನೆಯಲ್ಲಿ ಜಗಳವಾಗಿತ್ತು. ಇದರಿಂದ ನೊಂದ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸುದ್ದಿ ತಿಳಿದ ಮೃತರ ಕುಟುಂಬ ಸದಸ್ಯರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ನಂತರ ಮನೆಯಲ್ಲಿನ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮೇಯರ್ ವೆಂಕಟೇಶ್‌ಮೂರ್ತಿ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು. ಮಗುವಿನ ಹೆಸರಿನಲ್ಲಿ 20 ಲಕ್ಷ ಠೇವಣಿ ಇಡುವಂತೆ ಹಾಗೂ ವಿವಾಹದ ವೇಳೆ ಸ್ಮಿತಾಗೆ ನೀಡಿದ್ದ ಚಿನ್ನಾಭರಣ ಹಿಂತಿರುಗಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement