ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಯ ಕರ್ನಾಟಕ ಶಾಖೆ ಉದ್ಘಾಟನೆ

Rashmi Kasaragodu
Updated On : 18 Aug 2013, 1:14 am


ವಿಜಯಪುರ: ದೀನ ದಲಿತರ, ರೈತರ ಹಾಗೂ ಮಹಿಳೆಯರ ಪರವಾಗಿ ನಿಂತು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವ ಸಂಘಟನೆ ಎಂದರೆ ಅದು ಜಯ ಕರ್ನಾಟಕ ಸಂಘಟನೆ ಮಾತ್ರ ಎಂದು ಜಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ತಿಳಿಸಿದರು.
ಅವರು ಪಟ್ಟಣ ಸಮೀಪದ ದಂಡಿಗಾನಹಳ್ಳಿಯಲ್ಲಿ ನಡೆದ ಜಯ ಕರ್ನಾಟಕ ಸಂಘಟನೆಯ ತಾಲೂಕಿನಲ್ಲಿ ಮೊದಲ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಯುವಕರು ತತ್ವ ಸಿದ್ಧಾಂತಗಳನ್ನು ಅರಿತು ಕೆಲಸ ಮಾಡುವುದರಿಂದ ಯಾವುದೇ ಸದಸ್ಯೆಗಳಿಗೆ ಈಡಾಗದೆ ಅನ್ಯಾಯದ ವಿರುದ್ಧ ಹೊರಾಡಬಹುದು ಎಂದರು.
 ಹೊಸಕೋಟೆ ಕಾಂಗ್ರೆಸ್ ಮುಖಂಡ ಬಿ.ಗೋಪಾಲ್, ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಎನ್.ರಾಜ್‌ಗೋಪಾಲ್,ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಕೋರಮಂಗಲ ಗ್ರಾ.ಪಂ.ಮಾಜಿ ಅಧ್ಯಕ್ಷ ಮುನಿಭೈರಪ್ಪ, ದಂಡಿಗಾನಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement