ಭೀಮ ಅನಾಥಾಶ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ರಾಯಸಂದ್ರ ಗೇಟ್ ಬಳಿ ಇರುವ ಭೀಮ ಅನಾಥಾಶ್ರಮದಲ್ಲಿ ದೇವನಹಳ್ಳಿ ಡಾ.ಅಂಬೇಡ್ಕರ್ ಯುವಶಕ್ತಿ ಸಂಘದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ಮೂರ್ತಿ ತಮ್ಮ ಕಾರ್ಯಕರ್ತರೊಂದಿಗೆ ಬುಧವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಆಯೋಜಿಸಿದ್ದರು. ಈ ಸಂಧರ್ಭದಲ್ಲಿ ಮಕ್ಕಳಿಗೆ ಸಿಹಿ, ಮಧ್ಯಾನ್ಹದ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಸಂಘದ ಕಾರ್ಯದರ್ಶಿ ಹೆಚ್.ಮುನಿಕೃಷ್ಣ ತಿಳಿಸಿದರು.