ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲೆಗೆ ಕಲಿಕಾ ಸಾಮಗ್ರಿ ಕೊಡುಗೆ

Rashmi Kasaragodu
Updated On : 18 Aug 2013, 1:14 am

ಸೂಲಿಬೆಲೆ: ಸಮೀಪದ ಚಿಕ್ಕಕೋಲಿಗ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣಿಯಲ್ಲಿ ಹಲವಾರು ದಾನಿಗಳು ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಈಶ್ವರ್ ಪೂಜಾರ್ ತಿಳಿಸಿದ್ದಾರೆ.
ಸೂಲಿಬೆಲೆ ಹೋಬಳಿಯಲ್ಲಿರುವ ಚಿಕ್ಕೋಲಿಗ ಗ್ರಾಮದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣಿಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಾಂಜಿನಪ್ಪ ಧ್ವಜಾರೋಹಣ ನಡೆಸಿ ಮಕ್ಕಳು ದೇಶಾಭಿಮಾನ ರೂಢಿಸಿಕೊಳ್ಳಬೇಕು ಎಂದರು.
ದಾನಿಗಳಾದ ನಂದೀಶ್ 1 ಸಾವಿರ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ನೀಡಿದರೆ ವಿಜಯಕುಮಾರ್ ಹಾಗೂ ಮೋಹನ್‌ಕುಮಾರ್ ಸುಮಾರು 6 ಸಾವಿರ ಬೆಲೆಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ಸುಗುಣ ಕಂಪನಿಯ ವಾಸುದೇವ್, ಸುಬ್ರಹ್ಮಣ್ಯ ಸಿಹಿ ವಿತರಿಸಿದರು. ಇದೆ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಾಂಜಿನಪ್ಪ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆಶ್ವತ್ಥ ಮತ್ತಿತರರು ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement