ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಟುಂಬ ರಾಜಕೀಯಕ್ಕೆ ಚುನಾವಣೆ ಪಾಠ ಕಲಿಸುವ ವೇದಿಕೆಯಾಗಲಿ

Vishwanath S
Updated On : 19 Aug 2013, 1:02 am

ಕ.ಪ್ರ.ವಾರ್ತೆ , ಕನಕಪುರ , ಆ.18
ಬೆಂಗ್ರಾ ಲೋಕಸಭಾ ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಕನಕಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿದರು.
ಸಚಿವರಾದ ಶಿವರಾಜ ತಂಗಡಗಿ, ಸಂಸದ ಧ್ರುವನಾರಾಯಣ, ಕಾಂಗ್ರೆಸ್‌ಮುಖಂಡರಾದ ಹೊನ್ನಿಗನಹಳ್ಳಿ ಶ್ರೀಕಂಠು, ರವಿಶಂಕರ್, ಬೋವಿ ಸಂಘದ ರಾಜ್ಯಾಧ್ಯಕ್ಷ ಕುಮಾರನಾಯ್ಕ ಪಾಲ್ಗೊಂಡಿದ್ದರು. ಶಿವನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಹಿರಿಯ ಮುಖಂಡ ಹಲಗಪ್ಪ ಹಾಗೂ ಸಂಗಡಿಗರು ಶಾಸಕ ಡಿ.ಕೆ.ಶಿವಕುಮಾರ್ ನಾಯಕತ್ವ ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಮಾತನಾಡಿದ ಅಭ್ಯರ್ಥಿ ಡಿ.ಕೆ.ಸುರೇಶ್, ರಾಜಕೀಯದ ಚಲ್ಲಾಟವಾಡುತ್ತಿರುವ ಕುಮಾರಸ್ವಾಮಿ ಕುಟುಂಬದವರಿಗೆ ತಕ್ಕ ಪಾಠ ಕಲಿಸುವ ವೇದಿಕೆಯಾಗಬೇಕು. ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ಬದ್ಧ. ಜನರು ಆಶೀರ್ವದಿಸಿದರೆ ಲಭ್ಯವಾಗುವ 8 ತಿಂಗಳಲ್ಲಿಯೇ ಅಸಾಧಾರಣ ಸಾಧನೆ ತೋರುವ ವಿಶ್ವಾಸವಿದೆ ಎಂದರು.
ಮುಂಬರುವ ದಿನಗಳಲ್ಲಿ ಕನಕಪುರ ಹಾಗೂ ಬೆಂ.ಗ್ರಾ. ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿಯೂ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು, ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಈಗಾಗಲೇ 300 ಕೋಟಿ ರು. ಯೋಜನೆ ಸಿದ್ಧಪಡಿಸಿದೆ. ಚುನಾವಣೆ ನಂತರ ಅನುಷ್ಟಾನಗೊಳಿಸಲಾಗುವುದು ಎಂದು ಡಿ.ಕೆ.ಸುರೇಶ್ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿಲೀಪ್, ಸಿ.ವಿಜಯ್, ಎಸ್.ವಿ. ಗೋವಿಂದರಾಜು, ಜೆ.ನಟರಾಜ್ ಪಾಲ್ಗೊಂಡಿದ್ದರು. ಕಸಬಾ, ಕೋಡಿಹಳ್ಳಿ, ಸಾತನೂರು ಹಾಗೂ ಕನಕಪುರ ಪಟ್ಟಣಗಳಲ್ಲಿ ಅಭ್ಯರ್ಥಿ ಸುರೇಶ್ ರೋಡ್ ಶೋ ನಡೆಸಿ ಮತ ಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement