ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೊಲೀಸರ ಮೇಲೆ ಕಲ್ಲು ತೂರಾಟ: ಗಾಳಿಲಿ ಗುಂಡು

Vishwanath S
Updated On : 19 Aug 2013, 1:02 am

ಕ.ಪ್ರ.ವಾರ್ತೆ , ಸೂಲಿಬೆಲೆ , ಆ.18
ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲುನರಸಾಪುರದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಭಾನುವಾರ ನಡೆದಿದೆ.
ಗುಂಪು ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಹೊಸಕೋಟೆಯ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿನ್ನೆಲೆ:  ನಂದಗುಡಿ ಪೊಲೀಸ್ ಠಾಣೆಯಿಂದ ಆರೇಳು ಕಿ.ಮೀ ದೂರದ ಬೈಲುನರಸಾಪುರದಲ್ಲಿ ಕೆಲ ವರ್ಷಗಳಿಂದ ಎರಡು ಗುಂಪುಗಳ ಮಧ್ಯೆ ರಾಜಕಾರಣ ಮತ್ತು ಇನ್ನಿತರೇ ಕಾರಣಗಳಿಂದ ದ್ವೇಷ ಬೆಳೆದಿತ್ತು. ಪರಿಣಾಮ ಆಗಾಗ್ಗೆ ಘರ್ಷಣೆಗಿಳಿದು ಬಡಿದಾಡುತ್ತಿದ್ದರು.
ಇಂಥ ಘರ್ಷಣೆಗಳು ಪದೇ ಪದೇ ಮರುಕಳಿಸಿ ಗ್ರಾಮದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್, ದಂಡಾಧಿಕಾರಿಗಳು ಶಾಂತಿ ಸಭೆ ನಡೆಸಿ ಘಟನೆಗೆ ಕಾರಣರೆನ್ನಲಾದವರಿಂದ ಮುಚ್ಚಿಳಿಕೆ ಬರೆಸಿಕೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.
ಮತ್ತೆ ಘರ್ಷಣೆ:  ಕೆಲ ತಿಂಗಳಿಂದ ಎರಡೂ ಗುಂಪುಗಳೂ ತಣ್ಣಾಗಿದ್ದವು. ಆದರೆ, ಭಾನುವಾರ ಕ್ಷುಲಕ ಕಾರಣಕ್ಕೆ ಮತ್ತೆ ಮಾರಾಮಾರಿಗೆ ಇಳಿದಿದ್ದರು. ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಘರ್ಷಣೆಯಲ್ಲಿ ತೊಡಗಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟಕ್ಕೆ ಮುಂದಾದರು ಎನ್ನಲಾಗಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಬೇಕಾಯಿತು.
ಘಟನೆ ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್, ಡಿವೈಎಸ್ಪಿ ಕುಮಾರಸ್ವಾಮಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement