ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶೋಷಣೆಯಿಂದ ಹೊರಬರಲು ಕಾಂಗ್ರೆಸ್ ಬೆಂಬಲಿಸಿ: ರೇವಣ್ಣ

Vishwanath S
Updated On : 19 Aug 2013, 1:02 am

ಕ.ಪ್ರ.ವಾರ್ತೆ , ಮಾಗಡಿ , ಆ.18
ಗೊಲ್ಲರು ಬೇರೆಯವರ ಪಲ್ಲಕ್ಕಿ ಹೊತ್ತಿದ್ದು ಸಾಕು, ನಿಮ್ಮ ಪಲ್ಲಕ್ಕಿ ನೀವೇ ಹೊರುವಂತಹ ವಾತಾವರಣ ನಿರ್ಮಾಣಕ್ಕಾಗಿ ಬಯಸದೆ ಬಂದ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿಕೊಳ್ಳುವುದು ಅನಿವಾರ್ಯ. ಅಧಿಕ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಬೇಕು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
ಇಲ್ಲಿನ ಕರಲಹಳ್ಳಿ ಬಸವೇಶ್ವರಸ್ವಾಮಿ ದೇವಾಲಯದ ಬಳಿ ಏರ್ಪಡಿಸಿದ್ದ ಗೊಲ್ಲ ಸಮಾಜದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಸಮುದಾಯಗಳಿಗೂ ರಾಷ್ಟ್ರೀಯ ಸ್ವಾತಂತ್ರ್ಯ ನೀಡಿದೆ. ದಲಿತ ಸಮಾಜಕಿಂತಲೂ, ಗೊಲ್ಲ ಸಮಾಜ ನಿಜಕ್ಕೂ ಎಲ್ಲಾ ರಂಗಗಳಲ್ಲೂ ಶೋಷಣೆಗೆ ಒಳಗಾಗಿದೆ ಎಂದು ವಿಷಾದಿಸಿದರು.
ರಾಜಕೀಯವಾಗಿ ಅಧಿಕಾರ ವಿಕೇಂದ್ರಕರಣಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಬದ್ಧ. ಗೊಲ್ಲ ಸಮಾಜ ಮೊದಲು ಮೂಢನಂಬಿಕೆ ಬಿಟ್ಟು, ಅಕ್ಷರಸ್ಥರಾಗಬೇಕು. ಸಾಮಾಜಿಕ ಸ್ಥಾನಮಾನ ಗಳಿಸುವ ಹೋರಾಟ ಮನೋಭಾವ ಬೆಳಸಿಕೊಳ್ಳಬೇಕು. ಸೌಲತ್ತು ಪಡೆಯಲು ಮುಂದಾಗಬೇಕು. ಈ ದೇಶದಲ್ಲಿ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಮತ್ತು ಮಾಜಿ  ಮುಖ್ಯಮಂತ್ರಿ ದಿ.ದೇವರಾಜ ಅರಸು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿದ್ದಾರೆ. ನಾನು ಸಚಿವನಾಗಿದ್ದಾಗ ಗೊಲ್ಲ ಹೆಣ್ಣು ಮಕ್ಕಳ ನೋವಿಗೆ ಸ್ಪಂಧಿಸಿ, ಗೊಲ್ಲರಹಟ್ಟಿಗಳಿಗೆ ಸೂತಕದ ಮನೆ ಕಟ್ಟಿಸಿಕೊಟ್ಟೆ, ವಿದ್ಯುತ್, ನೀರು,ಆಶ್ರಯ ಮನೆ ಕೊಟ್ಟಿದ್ದೇನೆ ಎಂದು ಸಾಧನೆ ಕುರಿತು ವಿವರಿಸಿದರು.
ಯುವ ಮುಖಂಡರಾದ ನಾಗಚೂಡಯ್ಯ, ತುಳಸೀರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂರಾಜ ಪಟೇಲ್ ಇತರರು ಮಾತನಾಡಿದರು.
ನಾಗರಾಜು, ಅಶೋಕ್, ಗಂಗಯ್ಯ, ಗೊಲ್ಲ ಸಮಾಜದ ಮುಖಂಡರಾದ ಚಿತ್ತಯ್ಯ, ಬಾಲಿ ಚಿಕ್ಕಣ್ಣ, ಪೂಜಾರಿ ಚಿಕ್ಕಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಹೊಸಪೇಟೆ ಕಿಟ್ಟಿ, ರಾಜು, ಕೆಂಚಪ್ಪ, ವಿಶ್ವನಾಥ್, ಪಿ.ವಿ. ಸೀತಾರಾಂ, ಗೋವಿಂದಪ್ಪ, ತಾ.ಪಂ. ಸದಸ್ಯೆ ತೇಜಸ್ವಿನಿ ಮುದ್ದಹನುಮೇಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಣ್ಣ, ಕುಂಬಳಕಾಯಿ ಗಂಗಣ್ಣ, ರಾಜು, ವಿಜಯಕುಮಾರ್, ವಹೀದ್ ಅಹಮದ್, ಶಿವಣ್ಣ, ತ್ಯಾಗದೆರೆ ಪಾಳ್ಯದ ರಂಗಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement