ಮಾಗಡಿ: ಮತ ಕೇಂದ್ರಗಳಲ್ಲಿ ಬಿಗಿ ಭದ್ರತೆ
ಮಾಗಡಿ: ಮತ ಕೇಂದ್ರದಲ್ಲೆಡೆ ಬಿಗಿ ಪೋಲೀಸ್ ಬಂದೋಬಸ್ತು, ಈಗಾಗಲೇ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಸಿಬ್ಬಂದಿ ನಿಯೋಜನೆಗೊಂಡಿದ್ದು, ಸಕಲ ಸಿದ್ದತೆ ನಡೆದಿದ್ದು, ಚುನಾವಣೆ ಚಟುವಟಿಕೆ ಆರಂಭಿಸಲಿದ್ದಾರೆ ಎಂದು ಸಹಾಯಕ ಚುನಾವಣಾ ಅಧಿಕಾರಿ ತಹಸೀಲ್ದಾರ್ ಡಾ.ಬಿ.ಆರ್. ಹರೀಶ್‌ನಾಯಕ್ ತಿಳಿಸಿದ್ದಾರೆ.
ಬುಧವಾರ ನಡೆಯಲಿರುವ ಮತದಾನಕ್ಕೆ ಮಾಗಡಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಮಂಗಳವಾರ ಚುನಾವಣಾ ಸಿಬ್ಬಂದಿ ಚುನಾವಣಾ ಸಾಮಾಗ್ರಿ ಹಾಗು ಮತಯಂತ್ರಗಳೊಂದಿಗೆ ನಿಯೋಜನೆಗೊಂಡಿರುವ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು. ಒಟ್ಟು 1,250 ಸಿಬ್ಬಂದಿ ನಿಯೋಜಿಸಲಾಗಿದೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 288 ಮತಗಟ್ಟೆ ಕೇಂದ್ರಗಳಿವೆ.42 ಅತಿ ಸೂಕ್ಷ್ಮ, 57 ಸೂಕ್ಷ್ಮ ಮತಗಟ್ಟೆಳಿದ್ದು, ಉಳಿದಂತೆ 189 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ. ಒಟ್ಟು ಮತದಾರರ ಸಂಖ್ಯೆ 2 ಲಕ್ಷದ 3 ಸಾವಿರ. ಇದರಲ್ಲಿ 1 ಲಕ್ಷದ 4 ಸಾವಿರ ಪುರುಷ ಮತದಾರರು, 99 ಸಾವಿರ ಮಹಿಳಾ ಮತದಾರರಿದ್ದಾರೆ. ಬೆಳಿಗ್ಗೆ 8 ರಿಂದ 5 ಗಂಟೆಯವರೆವಿಗೂ ಮತದಾನ ನಡೆಯಲಿದೆ. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಟಾಗಿದೆ. ಜತೆಗೆ ಪ್ಯಾರ ಮಿಲಿಟರಿ ಪಡೆ ಸಹ ನಿಯೋಜನೆಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ನಡೆದಿದೆ ಎಂದು ಡಾ.ಹರೀಶ್ ನಾಯಕ್ ವಿವರಿಸಿದರು.
ದಾಖಲೆ ಇಲ್ಲದ
ರು. 4 ಲಕ್ಷ ವಶ
ಮಾಗಡಿ: ಬೆಂಗಳೂರು ಗ್ರಾಮಾಂತರ ಚುನಾವಣೆಯ ಹಿನ್ನೆಲೆಯಲ್ಲಿ ಮಾಗಡಿ ವಿಧಾನಸಭಾ ವ್ಯಾಪ್ತಿಯ ಚಕ್ ಪೋಸ್ಟ್‌ಗಳಲ್ಲಿ ಎಂಸಿಸಿ ತಂಡಗಳು ಕಾರ್ಯಾಚರಣೆ ತೀವ್ರಗೊಳಿಸಿದೆ. ಈ ವೇಳೆ ಮಂಗಳವಾರ ಗೋವಿಂದಪ್ಪ ಎಂಬುವರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಸುಮಾರು ರು. 4 ಲಕ್ಷ ಗಳನ್ನು ಬಾಲಾಜಿ ಚಿತ್ರಮಂದಿರ ಬಳಿ ಇರುವ ಚಕ್ ಪೋಸ್ಟ್ ತಂಡ ವಶಪಡಿಸಿಕೊಂಡಿದ್ದಾರೆ. ಯಾವುದೇ ದಾಖಲೆಗಳು ಇಲ್ಲದ ಕಾರಣ ಹಣ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ತಂದು ತೋರಿಸಲು ಕಾಲಾವಕಾಶ ನೀಡಿದ್ದು, ದಾಖಲೆ ನೀಡಿದರೆ ಹಣ ವಾಪಸ್ ನೀಡುವುದಾಗಿ ತಹಸೀಲ್ದಾರ್ ಡಾ.ಹರೀಶ್‌ನಾಯಕ್ ತಿಳಿಸಿದ್ದಾರೆ.