ಛಾಯಾಚಿತ್ರ ಪ್ರದರ್ಶನ
ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಫೋಟೋ ಮತ್ತು ವೀಡಿಯೋ ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಖ್ಯಾತಿಯ ಛಾಯಾಗ್ರಾಹಕ ಜೆ.ಕೆಂಪಣ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣ ಒಂದು ವೃತ್ತಿಗೂ ಮೀರಿದ ಸೃಜನಶೀಲ ಕಲೆ.
ಈ ನಿಟ್ಟಿನಲ್ಲಿ ಛಾಯಾಗ್ರಾಹಕ ವೃತ್ತಿಗಷ್ಟೇ ಸೀಮಿತವಾಗದೆ ತಮ್ಮ ಕಲಾತ್ಮಕ ಪ್ರವೃತ್ತಿ ದುಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಎಚ್.ಎಸ್.ನಾಗೇಶ್, ನಿರ್ದೇಶಕ ಸಂಪತ್‌ಕುಮಾರ್, ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್, ವಿ.ಎಸ್.ರವಿಕುಮಾರ್, ಕೆ.ಜಿ.ರಘುರಾಂ, ಮಹಿಳಾ ಸಮಾಜದ ಅಧ್ಯಕ್ಷೆ ದೇವಕಿ, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಸವರಾಜಯ್ಯ, ಗೌ.ಅಧ್ಯಕ್ಷ ಪಿಳ್ಳವೆಂಕಟಪ್ಪ, ಉಪಾಧ್ಯಕ್ಷ ರಾಜು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.