ನೀರಿಗೆ ಅಭಾವ; ಖಾಲಿ ಕೊಡ ಪ್ರದರ್ಶನ
ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯ ಮಣ್ಣೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಅಭಾವದಿಂದ ಬೇಸತ್ತ ಗ್ರಾಮಸ್ಥರು ಪಂಚಾಯ್ತಿಗೆ ಎಷ್ಟೇ ದೂರು ಮನವಿ ನೀಡಿದರು ಪ್ರಯೋಜನವಾಗುತ್ತಿಲ್ಲ ಎಂದು ಪಂಚಾಯ್ತಿ ಮುಂದೆ ಖಾಲಿ ಬಿಂದಿಗೆ ಪ್ರದರ್ಶಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ 6 ತಿಂಗಳಿಂದಲೂ ಕುಡಿಯುವ ನೀರಿನ ಬವಣೆ ಅನುಭವಿಸುತ್ತಿದ್ದೇವೆ. ಗ್ರಾಮ ಪಂಚಾಯ್ತಿ ವತಿಯಿಂದ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಕಳೆದ 2 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈ ಮನವಿಗೆ ಸ್ಪಂಧಿಸದೇ ಹಲವು ಕಾರಣ ನೀಡುತ್ತಲೆ ಬರುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರ ಆ ಅಧಿಕಾರಿಯ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸರ್ಕಾರದ ಕಾನೂನಿನಡಿಯಲ್ಲಿ ಸಕಾಲ ಯೋಜನೆಯ ಅಡಿಯಲ್ಲಿಯೂ ದೂರು ನೀಡಿದರು. ಪ್ರಯೋಜನ ಮಾತ್ರ ಸಿಗಲಿಲ್ಲ. ಇನ್ನು ಸರ್ಕಾರದ ಯಾವುದೇ ಯೋಜನೆ ಉಪಯೋಗವಾಗುತ್ತಿಲ್ಲ.
ಈ ಅಧಿಕಾರಿಗಳು ಯಾವುದೇ ಕಾನೂನನ್ನು ಪಾಲಿಸುತ್ತಿಲ್ಲ. ಇಂಥಹ ಅಧಿಕಾರಿಗಳಿಂದ ನಮ್ಮಂಥ ಬಡವರ ಕಷ್ಟ ಕೇಳುವವರು ಯಾರು ಎಂದು ತಮಗಾಗುತ್ತಿರುವ ಗೋಳು ತೋಡಿಕೊಳ್ಳುತ್ತಾರೆ.
ಪ್ರತಿಕ್ರಿಯೆ- ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಣ್ಣ ಅವರನ್ನು ಪ್ರಶ್ನಿಸಿದರೆ ನಾನು ಇಲ್ಲಿಗೆ ವರ್ಗವಾಗಿ ಬಂದಿದ್ದೇನೆ.
ಸಮಸ್ಯೆಯ ಬಗ್ಗೆ ಅಷ್ಟಾಗಿ ತಿಳಿಯದು ಆದರೂ ತಕ್ಷಣವೇ ಈ ಸಸ್ಯೆಗೆ ಸ್ಪಂದಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.