'ರಾಷ್ಟ್ರ ರಕ್ಷಣೆಗೆ ವಿದ್ಯಾರ್ಥಿ ಸಮೂಹ ಬದ್ಧವಾಗಲಿ'
ಸೂಲಿಬೆಲೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಬಗ್ಗೆ ಗೌರವ ಭಾವನೆ ಹೊಂದಿ ರಾಷ್ಟ್ರ ರಕ್ಷಣೆಗೆ ಬದ್ಧರಾಗಬೇಕು ಎಂದು ಅಖಲ ಭಾರತೀಯ ವಿದ್ಯಾರ್ಥಿ ಪರಿಷತ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ಆರ್. ದೇವರಾಜ್ ಕಿವಿಮಾತು ಹೇಳಿದ್ದಾರೆ.
ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ಷ ಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ರಕ್ಷ ಬಂಧನದ ಬಗ್ಗೆ ವಿದ್ಯಾರ್ಥಿಗಳಲ್ಲಿ ತಪ್ಪು ಕಲ್ಪನೆಯಿದ್ದು, ಮಾಹಿತಿ ಅರಿತು ರಾಷ್ಟ್ರದ ಬಗ್ಗೆ ಹಮ್ಮೆಯ ಗೌರವ ಭಾವನೆ ಪ್ರತಿಯೊಬ್ಬ ವಿದ್ಯಾರ್ಥಿ ಮೈಗೊಡಿಸಿಕೊಳ್ಳಬೇಕು.
ಐತಿಹಾಸಿಕವಾಗಿ ರಕ್ಷ ಬಂಧನಕ್ಕೆ ಹೆಚ್ಚಿನ ಮಹತ್ವವಿದ್ದು,ದೇಶದ ಪ್ರೇಮವನ್ನು ಸಾರುವಲ್ಲಿ ಇದರ ಪಾತ್ರ ಪ್ರಮುಖವಾಗಿದೆ.ಸ್ವಾರ್ಥ ಜೀವನಕ್ಕೆ ತಮ್ಮ ಜೀವಿತ ಬಲಿ ಕೊಡದೆ ದೇಶ,ಈ ನೆಲ ಜಲ ರಕ್ಷಣೆಗೆ ತಮ್ಮ ಕೈಲಾದ ಸೇವೆ ನೀಡಲು ವಿದ್ಯಾರ್ಥಿಗಳು ಬದ್ಧರಾಗಿರಬೇಕು ಎಂದು ಹೇಳಿದರು.
ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರವನ್ನು ಪ್ರೀತಿಸಿ ಏಕತೆ ಘನತೆ ಕಾಪಾಡಬೇಕುಎಂದರು.
ಕಾಲೇಜಿನ ಉಪನ್ಯಾಸಕ ವರ್ಗ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.