ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂತರ ಮಾಧ್ಯಮಿಕ ಶಾಲಾ ರಸ ಪ್ರಶ್ನೆ ಸ್ಪರ್ಧೆ

Rashmi Kasaragodu
Updated On : 2 Dec 2013, 1:21 am

ಕನಕಪುರ: ಕನಕಪುರದ ಡಾ.ಬಿ.ಶಶಿಧರ್ ಸ್ಮಾರಕ ಟ್ರಸ್ಟ್ ಹಾಗೂ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ ವತಿಯಿಂದ ಅಂತರ ಮಾಧ್ಯಮಿಕ ಶಾಲಾ ರಸಪ್ರಶ್ನೆ ಸ್ಪರ್ಧೆ ಇಲ್ಲಿನ ಬ್ಲಾಸಂ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಟ್ರಸ್ಟ್ ಅಧ್ಯಕ್ಷ ಎಂ. ವೆಂಕಟೇಶ್ ನೆರವೇರಿಸಿದರು. ಪ್ರಾಂಶುಪಾಲೆ ಗಂಗಾಂಬಿಕಾ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.
ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ ಜಿಕೆಬಿಎಂಎಸ್, ಜೆಟ್‌ಪಬ್ಲಿಕ್, ಸೆಂಟ್ ಮೈಖೇಲ್,
ಬ್ಲಾಸಂ, ಹಂಸವಾಹಿನಿ ಶಾಲೆಗಳು ಪೈಪೋಟಿಯ ಪ್ರದರ್ಶನ ನೀಡಿದವು. ರಸಪ್ರಶ್ನೆ ಸ್ಪರ್ಧೆಯ ಪ್ರಥಮ ಬಹುಮಾನ ಅತಿಥೇಯ ಬ್ಲಾಸಂ ಶಾಲೆ ಹಾಗೂ ದ್ವಿತೀಯ ಬಹುಮಾನ ಜಿಕೆಬಿಎಂಎಸ್ ಶಾಲೆಗಳು ಪಡೆದವು. ಟ್ರಸ್ಟ್ ಕಾರ್ಯದರ್ಶಿ ಕಾ.ಪ್ರಕಾಶ್‌ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement