ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಟೋ ಚಾಲಕರ ಸಂಘದವರಿಂದ ರಾಜ್ಯೋತ್ಸವ

Rashmi Kasaragodu
Updated On : 2 Dec 2013, 12:39 pm

ದೇವನಹಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣದ ಜೈ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರಿಂದ 15ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಅಂಧ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳ ವಿತರಣಾ ಸಮಾರಂಭ ದಿವಂಗತ ಎಸ್‌ಎಲ್‌ಎನ್ ಕುಮಾರ್ ಮಂಟಪದಲ್ಲಿ ಆಯೋಜಿಸಿದ್ದರು.
ಉದ್ಘಾಟನೆಯನ್ನು ಬಯಪ ಮಾಜಿ ಅಧ್ಯಕ್ಷ ಸಿ. ಅಶ್ವತ್ಥನಾರಾಯಣ್ ನೆರವೇರಿಸಿ ಆಟೋ ಚಾಲಕರು ತಮ್ಮ ದಿನ ನಿತ್ಯದ ದುಡಿಮೆಯಲ್ಲಿಯೂ ಹಣ ಉಳಿಸಿ ಮಕ್ಕಳಿಗೆ ಸಮವಸ್ತ್ರ ಹಾಗೂ ಬಟ್ಟೆಗಳ ವಿತರಣೆಯೊಂದಿಗೆ ರಾಜ್ಯೋತ್ಸ ಆಚರಿಸುತ್ತಿರುವುದು ಅಭಿನಂದನೀಯ. ಕನ್ನಡ ನಾಡಿನಲ್ಲಿರುವ ಎಲ್ಲ ಕನ್ನಡಿಗರು ತಮ್ಮ ಮಾತೃಭಾಷೆ, ನೆಲ ಜಲ ಸಂಸ್ಕೃತಿ ಪರಂಪರೆಗೆ ಗೌರವ ಕೊಡಬೇಕು, ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಜಗನ್ನಾಥ್, ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಮಂಜುನಾಥ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಪುರಸಭಾ ಸದಸ್ಯ ಬಿ.ದೇವರಾಜ್ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಛಲವಾದಿ ಸಂಘದ ಅಧ್ಯಕ್ಷ ಕಾಳಪ್ಪನವರ ವೆಂಕಟೇಶ್, ವಾಲ್ಮೀಕಿ ಸಂಘದ ಕಾರ್ಯಾಧ್ಯಕ್ಷ ಎಸ್. ನಾಗೇಶಬಾಬು ಹಾಗೂ ಬಾಲು ಪ್ರಸಾದ್, ಪುರಸಭಾ ಸದಸ್ಯ ಬೇಕರಿ ಮಂಜುನಾಥ್ ಉಪಸ್ಥಿತರಿದ್ದರು. ಶಿಕ್ಷಕ ಬಿ.ಪುಟ್ಟಸ್ವಾಮಿ ಸ್ವಾಗತ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement