ಬಿ.ರಂಗಸ್ವಾಮಿಗೆ ಶ್ರೇಷ್ಠ ತೋಟಗಾರಿಕೆ ಪ್ರಶಸ್ತಿ
ಕನಕಪುರ: ಕನಕಪುರದ ಸಾತನೂರು ಹೋಬಳಿ ಕೆ.ಪಾಳ್ಯ ಗ್ರಾಮದ ಬಿ.ರಂಗಸ್ವಾಮಿಯವರಿಗೆ ಬಾಗಲಕೋಟೆಯ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ರಾಜ್ಯಮಟ್ಟದ ಶ್ರೇಷ್ಠ ತೋಟಗಾರಿಕೆ ಪ್ರಶಸ್ತಿ ಲಭಿಸಿದೆ. ರಂಗಸ್ವಾಮಿಯವರು ಸಾವಯವ ಕೃಷಿ ಪದ್ಧತಿ, ಹನಿನೀರಾವರಿ ಪದ್ಧತಿ ಅನುಸರಿಸಿ ಬೆಳೆದಿರುವ ಅಪರೂಪವಾದ ಗೊಂಚಲು ನಿಂಬೇಹಣ್ಣುಗಳ ಸಂಶೋಧನೆಯನ್ನು ಪರಿಗಣಿಸಿ 2013 ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ
ತೋಟಗಾರಿಕೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ತೋಟಗಾರಿಕಾ ವಿವಿ ಆಡಳಿತಮಂಡಳಿ ಸದಸ್ಯ ಎಚ್.ಕೆ. ಶ್ರೀಕಂಠು, ತಾ.ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಅಭಿನಂದಿಸಿದ್ದಾರೆ.