ಬೆಟ್ಟ ಶ್ರೀರಂಗನಾಥಸ್ವಾಮಿಗೆ ವಿಜೃಂಭಣೆ ದೀಪೋತ್ಸವ
ಮಾಗಡಿ: ಮಾದಿಗೊಂಡನಹಳ್ಳಿ ಪುರಾತನ ಬೆಟ್ಟ ಶ್ರೀರಂಗನಾಥಸ್ವಾಮಿಗೆ ವಿಜೃಂಭಣೆಯ ದೀಪೋತ್ಸವ ನಡೆಯಿತು. ಕಾರ್ತೀಕ ಮಾಸದ ಪ್ರಯುಕ್ತ ಶನಿವಾರ ರಾತ್ರಿ ಏರ್ಪಡಿಸಿದ್ದ ದಿಪೋತ್ಸವ ಅಂಗವಾಗಿ ಮಂಗಳವಾದ್ಯದೊಂದಿಗೆ ಶ್ರೀ ರಂಗನಾಥಸ್ವಾಮಿ ಹಾಗೂ ಕರಡಿಗುಚ್ಚಮ್ಮದೇವಿಯ ಉತ್ಸವಮೂರ್ತಿಗಳ ಅದ್ಧೂರಿ ರಾಜಬೀದಿ ಮೆರವಣಿಗೆ ನಡೆಯಿತು. ನಂತರ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿದ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಹತ್ತಾರು ಅರ್ಚಕರು ವೇದಘೋಷ ಪಾರಾಯಣ ನಡೆಸಿದರು. ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ದೇವರುಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಗುರುಪೀಠದ ಎಂ.ಆರ್. ರಾಮಸ್ವಾಮಿ ಇತರೆ ಅರ್ಚಕರು ಶಾಸ್ತ್ರೋತ್ತವಾಗಿ ಸಂಪ್ರದಾಯಕ ಧಾರ್ಮಿಕ ಆಚರಣೆಗಳನ್ನು ನಡೆಸುವ ಮೂಲಕ ಮುಕ್ತಾಯಗೊಳಿಸಿದರು