ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಶೇಷ ಉದ್ಯಮಶೀಲತಾ ತರಬೇತಿ

Rashmi Kasaragodu
Updated On : 2 Dec 2013, 12:43 pm

ರಾಮನಗರ: ಬಿಡದಿ ಬಳಿಯ ಕೆನರಾ ಬ್ಯಾಂಕ್ ಪ್ರಾಯೋಜಿತ ಎ.ಡಿ.ಪೈ. ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೆಂಗಳೂರಿನ ಎನೇಬಲ್ ಇಂಡಿಯಾ ಮತ್ತು ಮಂಡ್ಯ, ರಾಮನಗರದ ಜಿಲ್ಲಾ ವಿಕಲಚೇತನರ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ವಿಕಲಚೇತನರಿಗಾಗಿ 13 ದಿನಗಳ ವಸತಿಯುತ ವಿಶೇಷ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ  ತರಬೇತಿಯು ಡಿ.16 ರಿಂದ 28ರವರೆಗೆ ನಡೆಯಲಿದೆ. ಸ್ವಂತ ಉದ್ಯೋಗ, ವ್ಯಾಪಾರ ನಡೆಸುವ ಆಸಕ್ತ 18 ರಿಂದ 45 ವರ್ಷದೊಳಗಿನ 8ನೇ ತರಗತಿಯಿಂದ  ಪದವಿವರೆಗೆ ಓದಿರುವ ದೈಹಿಕ ಹಾಗೂ ಸಾಮಾನ್ಯ ದೃಷ್ಟಿ ದೋಷವುಳ್ಳ ವಿಕಲಚೇತನರು ಡಿ.15ರೊಳಗೆ ರುಡ್ ಸೆಟ್ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗೆ ಬರುವವರು 4 ಪಾಸ್‌ಪೋರ್ಟ್ ಅಳತೆಯ ಫೋಟೋ, ರೇಷನ್ ಕಾರ್ಡ್, ಅಂಗವಿಕಲತಾ ಪ್ರಮಾಣ ಪತ್ರವನ್ನು ತರಬೇಕೆಂದು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ವಿಳಾಸ ಕೆನರಾ ಬ್ಯಾಂಕ್ ಎ.ಡಿ.ಪೈ. ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆ, ಲಕ್ಷ್ಮೀಸಾಗರ ಗೇಟ್ ಬಸ್ ನಿಲ್ದಾಣ, ವಾಜರಹಳ್ಳಿ, ಬಿಡದಿ ಹೋಬಳಿ, ರಾಮನಗರ ಜಿಲ್ಲೆ-562109. ದೂ. 080-27202092, ಮೊ.9740648830.
ಲಕ್ಷದೀಪೋತ್ಸವ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿ ನೇತೃತ್ವದಲ್ಲಿ ಶ್ರೀರಾಮಲಿಂಗಚಂದ್ರಚೌಡೇಶ್ವರಿ ದೇವಾಲಯದಲ್ಲಿ 19ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಡಿ.2ರ ಸೋಮವಾರಂದು ಕಾರ್ತೀಕ ಬಹುಳ ಅಮಾವಾಸ್ಯೆ ಅಂಗವಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ದೇವಾಲಯದ ಶ್ರೀರಾಮಲಿಂಗಚಂದ್ರಚೌಡೇಶ್ವರಿ, ಪಾರ್ವತಾಮಾತೆ, ಚೌಡೇಶ್ವರಿ ತಾಯಿ, ಶಾರದಾ ಮಾತೆ, ಷಣ್ಮುಖಸ್ವಾಮಿ, ನವಗ್ರಹಗಳು, ದೇವಲ ಮಹರ್ಷಿ ವಿಗ್ರಹಗಳಿಗೆ ವಿಶೇಷಾಲಂಕಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಗರೇಶ್ವರ ದೇಗುಲದಲ್ಲಿ: ಕಾರ್ತೀಕ ಮಾಸದ ಕಡೇ ಸೋಮವಾರ ಅಂಗವಾಗಿ ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆಯಲ್ಲಿರುವ ಶ್ರೀನಗರೇಶ್ವರ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಕಾರ್ಯಕ್ರಮ ಡಿ.2ರಂದು ಸಂಜೆ ನಡೆಯಲಿದೆ.
ವ್ಯಕ್ತಿ ನೇಣಿಗೆ ಶರಣು
ದೊಡ್ಡಬಳ್ಳಾಪುರ: ತಾಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಪಟ್ಟವನನ್ನು ಅರವಿಂದ್(28) ಎಂದು ಗುರುತಿಸಲಾಗಿದ್ದು, ಈತ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement