ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕದಾಸರ ಚಿಂತನೆ ಪ್ರಸ್ತುತವಾಗಲಿ: ಪಿನಾಕಪಾಣಿ

Rashmi Kasaragodu
Updated On : 3 Dec 2013, 12:30 pm

ಆನೇಕಲ್ಲು: ದಾರ್ಶನಿಕ ಹಾಗೂ ಚಿಂತಕ ಕನಕದಾಸರು ಹಲವು ಶತಮಾನಗಳ ಹಿಂದೆಯೇ ಜಾತೀಯತೆಯನ್ನು ಧಿಕ್ಕರಿಸಿ ವಾಸ್ತವಿಕತೆಯ ಬಿತ್ತನೆ ಬಿತ್ತಿದರು. ಭಗವಂತನ ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ತತ್ವ ದೂರ ದೃಷ್ಟಿಯ ಚಿಂತನೆ ಆಧುನಿಕ ಯುಗದಲ್ಲೂ ಪ್ರಸ್ತುತವಾಗಿದೆ  ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಕಾರ್ಯದರ್ಶಿ ಪಿನಾಕಪಾಣಿ ತಿಳಿಸಿದ್ದಾರೆ. ಅವರು ಪಟ್ಟಣದ ಆನೇಕಲ್ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕಸಾಪ ಘಟಕ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲ ಕಾಲಗಳಲ್ಲಿಯೂ ಅಂಕುಡೊಂಕುಗಳು ಸಹಜವಾಗಿ ನಡೆದುಕೊಂಡು ಬಂದಿದೆ. ಕೆಲವೇ ಮಂದಿ ಲೋಪ ದೋಷ ಗಳನ್ನು ತಿದ್ದಿ ತೀಡುವ ಕಾಯಕದಲ್ಲಿ ಸಫಲ ಕಾಣುತ್ತಾರೆ. ಕನಕದಾಸರು ದಾಸ ಸಾಹಿತ್ಯದಲ್ಲಿ ನೀಡಿದ ಕೊಡುಗೆ ಸ್ಥಾವರದಂತಹುದು ಎಂದರು. ಹನುಮದಾಸ್, ಕೋಶಾಧ್ಯಕ್ಷ ಅಪ್ಸರ್ ಅಲಿ ಖಾನ್ ಕಾರ್ಯಕ್ರಮ ಆಯೋಜಿಸಿದ್ದರು. ಸುನೀತ ಕುಮಾರ್ ಸ್ವಾಗತ, ವಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement