ಗ್ರಾಮಾಂತರ ಪ್ರದೇಶದಲ್ಲಿ ಕಲಾವಿದರ ಸಂಕಷ್ಟ ಹೆಚ್ಚು
ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶ್ರೀಮಾರುತಿ ಕನ್ನಡ ಕ್ರೀಡಾ
ಮತ್ತು ಸಾಂಸ್ಕೃತಿಕ ಹವ್ಯಾಸಿ ರಂಗಭೂಮಿ ಕಲಾವಿದರ ಸಂಘದ ನೇತೃತ್ವದಲ್ಲಿ ಸಾಮಾಜಿಕ ನಾಟಕಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕಂಬನಿ ಮತ್ತು ಹುಡುಗರ ಕಿತಾಪತಿ ಎಂಬ ನಾಟಕಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗಿದೆ. ಕೋಡಿಮೂರ್ತಿ ಈ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸುವ ಮೂಲಕ ಗಮನ ಸಳೆದರು.
ಸಮಾರಂಭಧಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಎಂ.ನರಸಿಂಹಮೂರ್ತಿ, ಕನ್ನಡ ರಂಗಭೂಮಿ ವಿಶೇಷತೆಗಳ ಕೊರತೆಯಿಂದ ಬಳಲುತ್ತಿದೆ. ಹೊಸಬಗೆಯ ಆಲೋಚನೆಗಳು ರಂಗಭೂಮಿಯನ್ನು ಬೆಳೆಸಬೇಕಿದೆ. ಸಿನಿಮಾರಂಗದ ಭರಾಟೆಯಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ರಂಗಭೂಮಿಗೆ ಯುವ ಕಲಾವಿದರು ಮತ್ತು ಪ್ರೋತ್ಸಾಹಕರ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಬೆಂ.ಗ್ರಾ.ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿದರು.