ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬದುಕು ಶುದ್ಧವಾಗಿರಲು ಜ್ಞಾನ ದೀವಿಗೆ ಅಗತ್ಯ: ಸ್ವಾಮೀಜಿ

Rashmi Kasaragodu
Updated On : 3 Dec 2013, 12:32 pm

ಮಾಗಡಿ: ಬದುಕು ಶುದ್ಧವಾಗಿರಲು ಜ್ಞಾನ ದೀವಿಗೆ ಅಗತ್ಯವಿದೆ ಎಂದು ಆದಿಚುಂಚನಗಿರಿ ಮಠಾದೀಶ ನಿರ್ಮಲಾನಂದ ಸ್ವಾಮೀಜಿ ನುಡಿದರು.
ಅವರು ಕಂಚಗಲ್ ಬಂಡೇಮಠದಲ್ಲಿ ಏರ್ಪಡಿಸಿದ್ದ ಕಾರ್ತೀಕ ಮಾಸದ ದೀಪೋತ್ಸವಕ್ಕೆ ಚಾಲನೆ ನೀಡಿ ನಂತರ ಧಾರ್ಮಿಕ ಚಿಂತನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ  ಅಂತಃಹಕರಣ ಶುದ್ಧಿಗೆ ಅವರವರ ಮಾರ್ಗವನ್ನು ಅವರವರಿಗೆ ಬಿಡುವುದು ಸೂಕ್ತ. ಮನುಷ್ಯನಿಗೆ ಅಧಿಕಾರ ಶಾಶ್ವತವಲ್ಲ, ಸಮಾಜಕ್ಕೆ ಸಲ್ಲಿಸಿದ ಸೇವೆಯೇ ಶಾಶ್ವತವಾಗಿ ಉಳಿಯುವುದು ಎಂದರು.
ಜೋತಿ ಬೆಳಕನ್ನು ನೀಡಿ ನಮ್ಮನ್ನು ಮುನ್ನಡೆಸಿದ್ದಂತೆ, ಶಿಕ್ಷಣವೊಂದೇ ಬದುಕಿಗೆ ಮಾರ್ಗದರ್ಶವಾಗುವುದು.  ಧರ್ಮ ಚಿಂತನೆಯಿಂದ ಮಾತ್ರ ಮಾನವ ಪವಿತ್ರ ಬದುಕು ಸಾಧ್ಯ ಎಂದು ಸಿದ್ದಗಂಗೆಯ ಕಿರಿಯ ಸ್ವಾಮೀಜಿ ಸಿದ್ದಲಿಂಗಶ್ರೀ ತಿಳಿಸಿದರು.
 ಶಿವಗಂಗೆ ಮೇಲಣ ಗವಿ ವೀರಸಿಂಹಾಸನ ಸಂಸ್ಥಾನದ ಮಾಠಾದೀಶ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಕಂಚಗಲ್ ಬಂಡೇಮಠದ ಬಸವಲಿಂಗಸ್ವಾಮಿ, ಗುಮ್ಮಸಂದ್ರದ ಚಂದ್ರಶೇಖರಸ್ವಾಮಿ, ಸಿದ್ದಲಿಂಗಸ್ವಾಮಿ, ಸಂಸದ ಬಸವರಾಜು, ಶಾಸಕ ದಯಾನಂದರೆಡ್ಡಿ, ಕಲ್ಯಾಣ ಬಸವರಾಜು ಮಾತನಾಡಿದರು.
ಡಿಸಿಪಿ ಆರ್. ರಮೇಶ್, ಶಿವನಂಜಯ್ಯ, ಕೆ.ವಿ. ನಂಜಪ್ಪ, ನಾಗರಾಜು ಇತರರನ್ನು ಸನ್ಮಾನಿಸಲಾಯಿತು. ಕಮಲಾ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯ ಶಿವರುದ್ರಯ್ಯ, ಗಂಗರೇವಣ್ಣ, ವಕೀಲ ಕೆ.ಎಸ್. ಪ್ರಕಾಶ್, ಮುದ್ದವೀರಪ್ಪ, ಹೇಮಾಂತಕಮಾರ್, ಪ್ರಭುದೇವ್ ಸೇರಿದಂತೆ ನೂರಾರು ಭಕ್ತರು, ವೀರಶೈವರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement